ಈ ರಾಶಿ ನಕ್ಷತ್ರದವರನ್ನು ಈ ರಾಶಿ ನಕ್ಷತ್ರದವರು ಮದುವೆಯಾದರೆ ವೈವಾಹಿಕ ಜೀವನವು ಹಾಳಾಗಬಹುದು

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವೈವಾಹಿಕ ಜೀವನ ಎನ್ನುವುದು ಬಹಳ ಮುಖ್ಯವಾದದ್ದು, ಇದೊಂದು ದೀರ್ಘ ಸಮಯದವರೆಗೆ ಅಂದರೆ ವ್ಯಕ್ತಿಯ ಅಂತ್ಯದವರೆಗೂ ಉಳಿಯುವಂತಹ ಸಂಬಂಧವಾಗಿದೆ, ಹಾಗಾಗಿ ವಿವಾಹದ ಯದಲ್ಲಿ ಸಾಕಷ್ಟು ಕಾಳಜಿಯನ್ನು ಮತ್ತು ಪ್ರಾಮುಖ್ಯತೆಯನ್ನು ನೀಡಲಾಗಿದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆ ಕಾರ್ಯಗಳನ್ನು ಏರ್ಪಡಿಸ ಬೇಕಾದರೆ ಮುಖ್ಯವಾಗಿ ಗಂಡು ಮತ್ತು ಹೆಣ್ಣಿನ ಜಾತಕವನ್ನು ತೋರಿಸಿ ಎರಡು ಜಾತಕಗಳ ಹೊಂದಾಣಿಕೆ ಆದರೆ ಮಾತ್ರ ವಿವಾಹ ಕಾರ್ಯಗಳನ್ನು ಮಾಡಲಾಗುತ್ತದೆ, ಯಾಕೆಂದರೆ ಜಾತಕಗಳು ಹೊಂದಾಣಿಕೆ ಆದರೆ ಅವರು ಜೀವನದಲ್ಲಿ ಹೊಂದಾಣಿಕೆಯಿಂದ ಉತ್ತಮವಾದ ವೈವಾಹಿಕ ಜೀವನವನ್ನು ನಡೆಸುತ್ತಾರೆ ಎಂಬ ನಂಬಿಕೆಯಿಂದ, ಒಂದು ವೇಳೆ ಜಾತಕಗಳು ಸರಿಯಾಗಿ ಹೊಂದಾಣಿಕೆ ಆಗದೇ ಹೋದರೆ ಯಾವುದೇ ಕಾರಣಕ್ಕೂ ಆ ವಿವಾಹವನ್ನು ಮಾಡುವುದಿಲ್ಲ ಯಾಕೆಂದರೆ ಜಾತಕದಲ್ಲಿ ಯಾವ ರೀತಿ ಹೊಂದಾಣಿಕೆ ಇಲ್ಲವೋ ಅದೇ ರೀತಿಯಾಗಿ ಜೀವನದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲದೆ ವೈವಾಹಿಕ ಜೀವನವು ಮುರಿದು ಬೀಳುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ವಿವಾಹದ ಮೊದಲು ಜಾತಕವನ್ನು ಹೊಂದಾಣಿಕೆ ಮಾಡುವುದು ಗಂಡು-ಹೆಣ್ಣಿನ ನಕ್ಷತ್ರಗಳನ್ನು ನೋಡುವುದು ಗಣಗಳನ್ನು ನೋಡುವುದು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಅದೇ ರೀತಿಯಾಗಿ ವೈವಾಹಿಕ ಜೀವನದಲ್ಲಿ ಮದುವೆಯಾಗಬೇಕಾದರೆ ರಾಶಿ ಮತ್ತು ಜನ್ಮನಕ್ಷತ್ರ ಇರುವವರನ್ನು ಮದುವೆಯಾದರೆ ವೈವಾಹಿಕ ಜೀವನವು ಬಹಳಷ್ಟು ಸುಂದರವಾಗಿರುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಯಾವ ರಾಶಿ ಮತ್ತು ಜನ್ಮನಕ್ಷತ್ರ ದವರನ್ನು ಯಾರು ಮದುವೆಯಾಗಬಾರದು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಧನಿಷ್ಠಾ ನಕ್ಷತ್ರ ಮತ್ತು ಶತವಿಷಾ ನಕ್ಷತ್ರಗಳು ಇವೆ, ಧನಿಷ್ಠ ನಕ್ಷತ್ರಕ್ಕೆ ನಕ್ಷತ್ರ ಅಧಿಪತಿ ಕುಜ ಆಗಿರುತ್ತಾನೆ ಮತ್ತು ಶತವಿಷಾ ನಕ್ಷತ್ರಕ್ಕೆ ಅಧಿಪತಿ ರಾಹು ಆಗಿದ್ದಾನೆ, ಈ ನಕ್ಷತ್ರಗಳು ಕುಂಭ ರಾಶಿಯಲ್ಲಿ ಬರುತ್ತದೆ, ಇನ್ನು ಅದೇ ರೀತಿಯಾಗಿ ಮಖ ನಕ್ಷತ್ರದ ಅಧಿಪತಿ ಕೇತು ಆಗಿದ್ದಾನೆ ಮತ್ತು ಹುಬ್ಬ ನಕ್ಷತ್ರದ ಅಧಿಪತಿ ಶುಕ್ರ, ಉತ್ತರ ನಕ್ಷತ್ರದ ಅಧಿಪತಿ ರವಿ ಆಗಿದ್ದಾನೆ, ಹಾಗಾಗಿ ಧನಿಷ್ಠಾ ನಕ್ಷತ್ರದವರು ಆಗಲಿ ಅಥವಾ ಶತಭಿಷಾ ನಕ್ಷತ್ರ ದವರು ಆಗಿರಲಿ ಈ ಎರಡು ನಕ್ಷತ್ರದವರು ಮಗ ನಕ್ಷತ್ರದವರೆಗೆ ಅಥವಾ ಹುಬ್ಬ ನಕ್ಷತ್ರದವರೆಗೆ ಅಥವಾ ಉತ್ತರ ನಕ್ಷತ್ರದವರಿಗೆ ವಿವಾಹವಾದರೆ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ, ಇವರಿಗೆ ಸಾಕಷ್ಟು ಕಷ್ಟಗಳು ಮೇಲಿಂದ ಮೇಲೆ ಬರುತ್ತವೆ, ಇದಕ್ಕೆ ನಿಖರವಾದ ಕಾರಣವನ್ನು ತಿಳಿಯಲು ಆಗುವುದಿಲ್ಲ, ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ, ಗಂಡ ಹೆಂಡತಿಯ ಮಧ್ಯೆ ಕಲಹಗಳು ಜಗಳಗಳು ಹೆಚ್ಚಾಗಿರುತ್ತವೆ, ಗಂಡ ಹೆಂಡತಿಯರು ದಾಂಪತ್ಯ ಜೀವನದಿಂದ ದೂರವಾಗುತ್ತಾರೆ ಅಥವಾ ಗಂಡ ಹೆಂಡತಿ ಒಂದೇ ಮನೆಯಲ್ಲಿದ್ದರೂ ಕೂಡ ದೈಹಿಕ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಒಂದು ವೇಳೆ ಗಂಡುಮಕ್ಕಳು ಆಗಲಿ ಹೆಣ್ಣುಮಕ್ಕಳು ಆಗಲಿ ಈ ನಕ್ಷತ್ರದವರು ಈಗಾಗಲೇ ವಿವಾಹ ಆಗಿದ್ದರೆ ಅವರು ವಿಶೇಷವಾಗಿ ಸುಬ್ರಹ್ಮಣ್ಯಸ್ವಾಮಿಗೆ ಭಸ್ಮಾರ್ಚನೆ ಮತ್ತು ವಿಶೇಷವಾಗಿ ಶಿರಾ ಅಭಿಷೇಕವನ್ನು ಮಾಡಿಸಬೇಕು ಅಂದರೆ ಹಾಲಿನ ಅಭಿಷೇಕವನ್ನು ಮಾಡಿಸಬೇಕು ಮತ್ತು ಅರಿಶಿಣ ಕುಂಕುಮದ ಅಭಿಷೇಕ ಈ ನಾಲ್ಕು ಅಭಿಷೇಕವನ್ನು ಸುಬ್ರಹ್ಮಣ್ಯಸ್ವಾಮಿಗೆ ಮಾಡಿಸುವುದರಿಂದ ದಾಂಪತ್ಯದಲ್ಲಿ ಆಗುವ ಕೆಟ್ಟ ಸಂದರ್ಭವನ್ನು ತಡೆಗಟ್ಟಬಹುದು ಸ್ವಲ್ಪ ಮಟ್ಟಿಗೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.

Also Read  ಗಾಂಧಿ ಜಯಂತಿ: ಕಡಬ ಪಟ್ಟಣ ಸ್ವಚ್ಚತಾ ಕಾರ್ಯಕ್ರಮ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top