ಗುತ್ತಿಗಾರು: ಅಡಿಕೆ ಕದ್ದರೆಂದು ದೇವಸ್ಥಾನಕ್ಕೆ ತೆರಳಿ ಹರಕೆ ಸಲ್ಲಿಸಿದ ಕುಟುಂಬ

(ನ್ಯೂಸ್ ಕಡಬ) Newskadaba.com ಗುತ್ತಿಗಾರು, ಅ. 28. ತೋಟದಿಂದ ಹಣ್ಣಡಿಕೆ ಕದ್ದರೆಂದು ದೇವಸ್ಥಾನಕ್ಕೆ ತೆರಳಿ ಹರಕೆ ಸಲ್ಲಿಸಿದ ಘಟನೆ ಗುತ್ತಿಗಾರು ಗ್ರಾಮದ ಪುರ್ಲುಮಕ್ಕಿ ಎಂಬಲ್ಲಿ ನಡೆದಿದೆ.

ಗುತ್ತಿಗಾರಿನ ಪುರ್ಲುಮಕ್ಕಿಯ ಎನ್.ಎಲ್.ಈಶ್ವರ ಎಂಬವರ ಮನೆಯಿಂದ ಕೊಂಚ ದೂರದಲ್ಲಿರುವ ತೋಟಕ್ಕೆ ನುಗ್ಗಿದ ಕಳ್ಳರು ಅಡಿಕೆ ಗೊಂಚಲು ತೆಗೆದು ಅದರಿಂದ ಅಡಿಕೆ ತೆಗೆದು ಖಾಲಿ ಗೊಂಚಲನ್ನು ತೋಟದಲ್ಲೇ ಬಿಸಾಡಿರುವುದು ಕಂಡು ಬಂದಿದೆ. ಈ ಕುರಿತು ಮನೆಯವರು ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

Also Read  ಕಡಬದ ಸರಸ್ವತೀ ವಿದ್ಯಾಲಯದಲ್ಲಿ ರಥಸಪ್ತಮಿ ಕಾರ್ಯಕ್ರಮ ➤ ಸೂರ್ಯನ ಆರಾಧನೆ ಮಾಡುವುದರಿಂದ ಆರೋಗ್ಯ ಸುಧಾರಣೆ: ಕರುಣಾಕರ ಗೋಗಟೆ

error: Content is protected !!
Scroll to Top