ಶಾಲಾ ವಾಹನ ಹಾಗೂ ಬೈಕ್ ನಡುವೆ ಢಿಕ್ಕಿ ➤ ಇಬ್ಬರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) Newskadaba.com ಮುದ್ದೇಬಿಹಾಳ, ಅ. 27. ಶಾಲಾ ವಾಹನ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ತಾಲ್ಲೂಕಿನ ಜೈನಾಪೂರ ಕ್ರಾಸ್ ಬಳಿ ನಡೆದಿದೆ.

ಮೃತಪಟ್ಟವರನ್ನು ಚವನಬಾವಿ ಗ್ರಾಮದ ಶಿವಪ್ಪ ಹಣಮಪ್ಪ ಪೂಜಾರಿ(30) ಹಾಗೂ ಸಂಗಪ್ಪ ಬಸಪ್ಪ ಪೂಜಾರಿ(40) ಎಂದು ಗುರುತಿಸಲಾಗಿದೆ. ಚವನಬಾವಿ ರೇವಣಸಿದ್ದೇಶ್ವರ ಪ್ರಾಥಮಿಕ ಶಾಲೆಯ ವಾಹನ ವಿದ್ಯಾರ್ಥಿಗಳನ್ನು ತುಂಬಿಕೊಂಡು ನಾಲತವಾಡದಿಂದ ಚವನಬಾವಿ ಗ್ರಾಮದ ಶಾಲೆಯ ಕಡೆಗೆ ಬರುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕೊರಗಜ್ಜನ ವೇಷ ಹಾಕಿ ವಿವಾದಕ್ಕೆ ಕಾರಣನಾದ ವರನ ಮನೆಯ ಮೇಲೆ ಕಿಡಿಗೇಡಿಗಳಿಂದ ದಾಳಿ ➤ ದೂರು ದಾಖಲು

error: Content is protected !!
Scroll to Top