ಬೆಳ್ತಂಗಡಿ: ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿದ ಹಿನ್ನೆಲೆ ಕಾಲೇಜಿನಿಂದ ಹೊರಹಾಕಿದ ವಿದ್ಯಾಸಂಸ್ಥೆ ➤ ಕಾಲೇಜು ಮುಂಭಾಗ ಒಂಟಿ ಪ್ರತಿಭಟನೆ ಕುಳಿತ ವಿದ್ಯಾರ್ಥಿ

(ನ್ಯೂಸ್ ಕಡಬ) Newskadaba.com ಬೆಳ್ತಂಗಡಿ, ಅ. 27. ವಿದ್ಯಾರ್ಥಿ ಸಂಘಟನೆಯೊಂದರಲ್ಲಿ ಗುರುತಿಸಿದ್ದಾನೆ ಎಂಬ ಕಾರಣಕ್ಕೆ ಕಾಲೇಜಿನಿಂದ ವಿದ್ಯಾರ್ಥಿಯನ್ನು ಹೊರಹಾಕಿದ ಘಟನೆ ಬೆಳ್ತಂಗಡಿಯ ವಾಣಿ ಪಿ.ಯು ಕಾಲೇಜಿನಲ್ಲಿ ನಡೆದಿದೆ.


ವಿದ್ಯಾರ್ಥಿ ಶಹದ್ ಮೊಹಮ್ಮದ್ ಎಂಬ ಎಂಬಾತನನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿದೆ. ಕಳೆದ 19 ದಿನಗಳಿಂದ ಸಂಸ್ಥೆಯೊಂದಿಗೆ ಕಾಲೇಜಿಗೆ ಸೇರಿಸುವಂತೆ ವಿನಂತಿ ಮಾಡಿದ್ದರೂ ಇದಕ್ಕೆ ಮಣಿಯದ ಸಂಸ್ಥೆಯು ಕಾಲೇಜಿನಿಂದ ಹೊರಹಾಕಿದೆ. ಇಂದು ನ್ಯಾಯಕ್ಕಾಗಿ ವಿದ್ಯಾರ್ಥಿಯು ಕಾಲೇಜಿನ ಮುಂಭಾಗದಲ್ಲಿ ಕುಳಿತು ಒಂಟಿ ಪ್ರತಿಭಟನೆ ನಡೆಸುತ್ತಿದ್ದು, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಬೇಕು ಹಾಗೂ ಡಿಬಾರ್ ಹಿಂಪಡೆಯಬೇಕೆಂದು ವಿದ್ಯಾರ್ಥಿ ಆಗ್ರಹಿಸುತ್ತಿದ್ದಾನೆ.

Also Read  ನಟ ದರ್ಶನ್ ಗನ್ ಲೈಸೆನ್ಸ್ ತಾತ್ಕಾಲಿಕ ರದ್ದು

error: Content is protected !!
Scroll to Top