ಐಸಿಸ್ ನಲ್ಲಿ ಸಕ್ರಿಯವಾಗಿರುವ ಶಂಕೆ ➤ ಬೆಂಗಳೂರಿನ ದಂತವೈದ್ಯ ಅರೆಸ್ಟ್

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 27. ಬೆಂಗಳೂರು ಮೂಲದ ದಂತವೈದ್ಯ ಡಾ. ಮೊಹಮ್ಮದ್ ತೌಕೀರ್‌ ಎಂಬಾತನನ್ನು ಶಂಕಿತ ಉಗ್ರನೆಂದು ಹೇಳಿ ರಾಷ್ಟ್ರೀಯ ತನಿಖಾದಳ ದೆಹಲಿಯಲ್ಲಿ ಬಂಧಿಸಿ, ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ನವೆಂಬರ್ 8ರ ವರೆಗೆ ವಶಕ್ಕೆ ಪಡೆದಿದೆ.

ಐಸಿಸ್‌ ಗೆ ನೇಮಕಾತಿ ಮತ್ತು ಹಣ ಸಂಗ್ರಹ ಮಾಡಿದ ಆರೋಪದಡಿ ದೆಹಲಿಯಲ್ಲಿ ಬೆಂಗಳೂರಿನ ತಿಲಕನಗರ ಬಳಿಯ ಬಿಸ್ಮಿಲ್ಲಾ ನಗರದ ತೌಕೀರ್‌ನನ್ನು ಎನ್‌ಐಎ ತಂಡ ಬಂಧಿಸಿದೆ. ಈತ ಐಸಿಸ್‌ನಲ್ಲಿ ಸಕ್ರಿಯನಾಗಿದ್ದ ಬಗ್ಗೆ ತನಿಖೆಯಲ್ಲಿ ಪುರಾವೆಗಳು ಸಿಕ್ಕಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸಲು ವಶಕ್ಕೆ ನೀಡುವಂತೆ ಎನ್‌ಐಎ ಅಧಿಕಾರಿಗಳು ಕೋರ್ಟ್‌ಗೆ ಮನವಿ ಮಾಡಿದ್ದರು.

Also Read  ‘ಕೆಎಸ್ಸಾರ್ಟಿಸಿ’ ಬಸ್ ಕೊಂಡೊಯ್ಯವವರಿಗೆ ಬಿಗ್ ಶಾಕ್ - ಕಿ.ಮೀ. ದರದಲ್ಲಿ ಹೆಚ್ಚಳ

error: Content is protected !!