ಕೂಳೂರು ನಾಗನ ಕಟ್ಟೆಯಿಂದ ನಾಪತ್ತೆಯಾಗಿದ್ದ ನಾಗನ ಕಲ್ಲುಗಳು ಪತ್ತೆ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 27. ಇಲ್ಲಿನ ಹೊರವಲಯದ ಕೂಳೂರು ನಾಗನಕಟ್ಟೆಯಿಂದ ನಾಪತ್ತೆಯಾಗಿದ್ದ 6 ನಾಗನಕಟ್ಟೆಗಳು ಮಂಗಳವಾರದಂದು ಸಮೀಪದ ಗದ್ದೆಯಲ್ಲಿ ಪತ್ತೆಯಾಗಿದೆ.

ನಾಗನಕಟ್ಟೆಯಲ್ಲಿದ್ದ 19 ನಾಗನ ಕಲ್ಲುಗಳ ಪೈಕಿ‌ 6 ಕಲ್ಲುಗಳು ಶನಿವಾರದಂದು ನಾಪತ್ತೆಯಾಗಿದ್ದು, ಒಂದು ಕಲ್ಲನ್ನು ಹುಡಿಗೈಯ್ಯಲಾಗಿತ್ತು. ಈ ಕುರಿತು ತನಿಖೆ ಮುಂದುವರಿಸಿದ ಕಾವೂರು ಪೊಲೀಸರು ಮಂಗಳವಾರದಂದು ಹುಡುಕಾಟ ಆರಂಭಿಸಿದ್ದರು. ಅದರಂತೆ ನಾಗನಕಟ್ಟೆ ಸಮೀಪದ ಬಾವಿಯ ನೀರನ್ನು ಖಾಲಿ ಮಾಡಿ ಹುಡುಕಾಡಲಾಯಿತಾದರೂ ಕಲ್ಲು ಪತ್ತೆಯಾಗಿರಲಿಲ್ಲ. ಬಳಿಕ ಸಮೀಪದ ಗದ್ದೆಯಲ್ಲಿ ಪತ್ತೆಯಾಗಿವೆ.

Also Read  ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದೆ      ➤ ಆರಗ ಜ್ಞಾನೇಂದ್ರ…!

 

error: Content is protected !!
Scroll to Top