ಗಾಂಜಾ ಸೇವಿಸಿ ಶಾಲಾ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿ ಸಿಗರೇಟು ಸೇದಿಸಿದ ಪುಂಡರು..! ➤ ಶಾಲಾ ಆವರಣದಲ್ಲೇ ದುಷ್ಕೃತ್ಯ

(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 25. ಗಾಂಜಾ ಸೇವಿಸಿದ ಅಮಲಿನಲ್ಲಿ ಯುವಕರ ಗುಂಪೊಂದು ಶಾಲಾ ಮಕ್ಕಳನ್ನು ಮರಕ್ಕೆ ಕಟ್ಟಿಹಾಕಿದ ಘಟನೆ ಬೆಂಗಳೂರಿನ ಕೆ ಆರ್ ಪುರಂನ ದೇವಸಂದ್ರ ವಾರ್ಡ್ ನಲ್ಲಿ ನಡೆದಿದೆ.

ಸರ್ಕಾರಿ ಶಾಲಾ ಆವರಣದಲ್ಲಿ ಗಾಂಜಾ ಸೇವನೆ ಮಾಡಿದ ಯುವಕರು, ಮಕ್ಕಳನ್ನು ಮರಕ್ಕೆ ಕಟ್ಟಿ ಬಲವಂತದಿಂದ ಸಿಗರೇಟ್ ಸೇದಿಸಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಯ ಪೋಷಕರೋರ್ವರು, ಗಾಂಜಾ ಸೇವನೆಯ ಯುವಕರ ಗುಂಪೊಂದು ನಮ್ಮ ಮಕ್ಕಳಿಗೆ ಕೆಟ್ಟ ಬುದ್ದಿಗಳನ್ನು ಕಲಿಸಿಕೊಡುತ್ತಿದೆ. ಅವರಿಗೆ ಮದ್ಯ ಹಾಗೂ ಗ್ಲಾಸ್ ತಂದು ಕೊಡೋದಕ್ಕೆ ಬಳಸಿಕೊಳ್ಳುತ್ತಿದೆ. ಒಂದು ವೇಳೆ ಅವರ ಕೆಲಸ ಮಾಡದಿದ್ದರೆ, ಶಾಲೆಗೆ ತೆರಳಿ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಯುವಕರಿಗೆ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.

Also Read  ಮಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

error: Content is protected !!
Scroll to Top