ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಯುವತಿ ಮೃತ್ಯು..!

(ನ್ಯೂಸ್ ಕಡಬ) Newskadaba.com ಕೊಡಗು, ಅ. 25. ಗೆಳತಿಯರೊಂದಿಗೆ ಮಡಿಕೇರಿ ಪ್ರವಾಸಕ್ಕೆಂದು ಬಂದಿದ್ದ ಐವರು ಗೆಳೆತಿಯರ ಪೈಕಿ ಓರ್ವ ಯುವತಿ ಹೋಂ ಸ್ಟೇನಲ್ಲಿ ಅನುಮಾನಸ್ಪಾದವಾಗಿ ಮೃತಪಟ್ಟ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ವಿಘ್ನೇಶ್ವರಿ ಈಶ್ವರ್ (24) ಎಂದು ಗುರುತಿಸಲಾಗಿದೆ. ಮೂಲತಃ ಬಳ್ಳಾರಿಯ ಈಕೆ ಮುಂಬೈನಲ್ಲಿ ಉದ್ಯೋಗದಲ್ಲಿದ್ದಳು. ಇತ್ತೀಚೆಗೆ ಗೆಳೆತಿಯರೊಂದಿಗೆ ರಾಜ್ಯಕ್ಕೆ ಬಂದಿದ್ದ ಈಶ್ವರಿ, 5 ದಿನದ ಪ್ರವಾಸಕ್ಕೆಂದು ಸ್ನೇಹಿತೆಯರೊಂದಿಗೆ ಮಡಿಕೇರಿಗೆ ತೆರಳಿದ್ದಳು. ಎರಡು ದಿನ ಸುತ್ತಾಡಿದ ಸ್ನೇಹಿತರು ಮಡಿಕೇರಿಯ ಹೋಂ ಸ್ಟೇನಲ್ಲಿ ತಂಗಿದ್ದು, ಮೂರನೇ ದಿನವಾದ ಭಾನುವಾರದಂದು ರಾತ್ರಿ ಈಶ್ವರಿ ಮೃತಪಟ್ಟಿದ್ದಾಳೆ. ಹೋಂ ಸ್ಟೇ ಬಾತ್ ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಪತ್ತೆಯಾಗಿದ್ದು, ಗೀಸರ್ ನಲ್ಲಿ ಗ್ಯಾಸ್ ಸೋರಿಕೆಯಾಗಿ ಮೃತಪಟ್ಟಿರಬಹುದು ವಿದ್ಯಾರ್ಥಿಗಳಿಗೂ ಶಂಕಿಸಲಾಗಿದೆ. ಆಸ್ಪತ್ರೆಗೆ ದಾಖಲಿಸುವ ವೇಳೆ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಈ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಾರು ಪಾರ್ಕಿಂಗ್ ವಿಚಾರಕ್ಕೆ ಚಾಲಕ ಹಾಗೂ ಟ್ರಾಫಿಕ್ ನಡುವೆ ವಾಗ್ವಾದ..!   ➤ಚಾಲಕನ ಜೊತೆ ಅನುಚಿತ ವರ್ತನೆ ಮಾಡಿದ  'ಟ್ರಾಫಿಕ್ ಪೊಲೀಸ್'.!

error: Content is protected !!
Scroll to Top