(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 25. ಕೊರೋನಾ ಲಾಕ್ ಡೌನ್ ನಿಂದಾಗಿ ಮುಚ್ಚಲಾಗಿದ್ದ ಒಂದರಿಂದ ಐದನೇ ತರಗತಿಯ ಶಾಲೆಗಳು ರಾಜ್ಯಾದ್ಯಂತ ಇಂದಿನಿಂದ ಆರಂಭಗೊಂಡಿದೆ. ಶೆ. 50ರಷ್ಟು ಹಾಜರಾತಿಯಲ್ಲಿ ಶಾಲೆ ಆರಂಭಿಸಲು ಸರ್ಕಾರ ಸದ್ಯ ಸೂಚನೆಯನ್ನು ನೀಡಿದೆ.
ಕೊರೋನಾ ನಿಯಂತ್ರಣಕ್ಕೆ ಬಂದ ಹಿನ್ನೆಲೆ ಶಾಲೆಗಳನ್ನು ಕೊರೋನಾ ನಿಯಮಗಳಂತೆ ತೆರೆಯಲು ಸರಕಾರ ನಿರ್ಧರಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ಶೆ. 50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಅನುಮತಿ ನೀಡಲಾಗಿದ್ದು, ಇನ್ನುಳಿದ ಎರಡು ದಿನ ಶಾಲಾ ಕೊಠಡಿಯ ಸ್ವಚ್ಛಗೊಳಿಸಿ, ಸ್ಯಾನಿಟೈಸರ್ ಗೆ ಅವಕಾಶ ನೀಡಬೇಕು ಎಂದು ಹೇಳಿದೆ. ಒಂದು ದಿನ ರಜೆ, ಒಂದು ದಿನ ತರಗತಿ ನಡೆಸಲಾಗುವುದು. ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ, ಅಲ್ಲದೇ ಒಪ್ಪಿಗೆ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ ಸೋಂಕು ಇಲ್ಲದೇ ಇರುವುದನ್ನು ದೃಢಪಡಿಸಬೇಕು, ವಿದ್ಯಾರ್ಥಿಗಳ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ತರಗತಿಗೂ ಅವಕಾಶ ನೀಡಲಾಗಿದೆ. 15ರಿಂದ 20 ಮಕ್ಕಳ ತಂಡವನ್ನು ರಚಿಸಿ ಮಾಠ ಮಾಡಬೇಕು ಹಾಗೆಯೇ ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ನೀಡಲಾಗುವುದು.