ಮಕ್ಕಳು ನಿಮ್ಮ ಮಾತು ಕೇಳಿದ ಹೋದರೆ ಏನು ಕಾರಣ ಎಂದು ತಿಳಿದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮನೆಯಲ್ಲಿ ಮಕ್ಕಳು ತಂದೆ-ತಾಯಿ ಹೇಳಿದ ಮಾತನ್ನು ಕೇಳಿದರೆ ಆಗ ತಂದೆ ತಾಯಿಯ ಸಂತೋಷ ಆಗುವುದರ ಜೊತೆಗೆ ಮನೆಯಲ್ಲಿ ಕೂಡ ನೆಮ್ಮದಿ ನೆಲೆಸುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ ಮಕ್ಕಳು ತಂದೆ ತಾಯಿ ಹೇಳಿದ ಮಾತನ್ನು ಕೇಳುವುದಿಲ್ಲ, ಅದು ದೊಡ್ಡ ಮಕ್ಕಳಾಗಲಿ ಅಥವಾ ಚಿಕ್ಕ ಮಕ್ಕಳಾಗಲಿ, ದೊಡ್ಡ ಮಕ್ಕಳ ವಿಷಯಕ್ಕೆ ಬಂದರೆ ಮುಖ್ಯವಾಗಿ ವಿದ್ಯಾಭ್ಯಾಸದ ವಿಚಾರದಲ್ಲಿ ಉದ್ಯೋಗದ ವಿಚಾರದಲ್ಲಿ ಅದರಲ್ಲೂ ವಿವಾಹದ ವಿಚಾರದಲ್ಲಿ ಕೆಲವು ಮಕ್ಕಳು ತಂದೆ-ತಾಯಿ ಹೇಳಿದ ಹಾಗೆ ನಡೆದುಕೊಳ್ಳುವುದಿಲ್ಲ, ನಮ್ಮ ಆಯ್ಕೆಯಂತೆ ಜೀವನ ಇರಬೇಕು ಎಂದು ಮಕ್ಕಳು ಹಠವನ್ನು ಮಾಡುತ್ತಾರೆ, ಅದರಲ್ಲೂ ವಿವಾಹಕ್ಕೆ ಸಂಬಂಧಿಸಿದಂತೆ ಮಕ್ಕಳು ನಾವು ಇಷ್ಟ ಪಟ್ಟಂತಹ ವ್ಯಕ್ತಿಗಳನ್ನೇ ಮದುವೆ ಆಗುವುದು ಎಂದು ತಂದೆ ತಾಯಿಗೆ ಎದುರಿಸುತ್ತಾರೆ, ಇದರಿಂದ ತಂದೆ ತಾಯಿ ನಿರಾಸೆಗೆ ಒಳಗಾಗುವುದರ ಜೊತೆಗೆ ನಮ್ಮ ಮಕ್ಕಳು ಯಾಕೆ ಈ ರೀತಿಯಾಗಿ ಆಡುತ್ತಿದ್ದಾರೆ ಎಂಬ ಚಿಂತೆಯೂ ಕೂಡ ಬರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಮಕ್ಕಳು ತಂದೆ ತಾಯಿ ಹೇಳಿದ ಮಾತನ್ನು ಕೇಳದೆ ಇರುವುದಕ್ಕೆ ಕೆಲವೊಮ್ಮೆ ಜಾತಕವು ಕೂಡ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಜಾತಕದ ಮುಖಾಂತರ ಮಕ್ಕಳು ಯಾವ ಕಾರಣಕ್ಕಾಗಿ ತಂದೆ ತಾಯಿ ಹೇಳಿದ ಮಾತನ್ನು ಕೇಳುವುದಿಲ್ಲ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಯಾವುದೇ ವ್ಯಕ್ತಿ ಜೀವನದಲ್ಲಿ ಜನ್ಮ ಜಾತಕ ಬಹಳ ಮುಖ್ಯವಾಗಿರುತ್ತದೆ, ಜನನ ನಕ್ಷತ್ರ, ಲಗ್ನ ಹಾಗೂ ಲಗ್ನದಿಂದ ಎರಡು, ಐದು, ಏಳು ಮತ್ತು ಒಂಬತ್ತನೇ ಸ್ಥಾನಗಳು ಬಹಳ ಮುಖ್ಯವಾಗಿರುತ್ತದೆ, ಶುಕ್ರ ಗ್ರಹ ಯಾವ ಸ್ಥಾನದಲ್ಲಿ ಇದ್ದಾನೆ, ರಾಹು ಹಾಗೂ ಕೇತು ಗ್ರಹದ ಸ್ಥಿತಿ ಹೇಗಿದೆ ಎಂಬುದನ್ನು ಗಮನಿಸಬೇಕು, ಇದರ ಮೂಲಕ ಪ್ರೇಮ ವಿವಾಹ ಆಗುತ್ತದೋ ಇಲ್ಲವೋ ಎಂಬುದನ್ನು ತಿಳಿಯಬಹುದಾಗಿದೆ. ಇನ್ನು ಕೃತ್ತಿಕಾ, ಆಶ್ಲೇಷಾ ನಕ್ಷತ್ರದ ಮಕ್ಕಳನ್ನು ಬಹಳ ಜೋಪಾನವಾಗಿ ಬೆಳೆಸಬೇಕು, ಈ ನಕ್ಷತ್ರದಲ್ಲಿ ಜನಿಸಿದವರು ಒರಟಾಗಿ ಮನಸಿಗೆ ನೋವಾಗುವಂಥಹ ಮಾತುಗಳನ್ನೇ ಹೆಚ್ಚಿಗೆ ಆಡುತ್ತಾರೆ, ಇವರ ನಕ್ಷತ್ರದ ಸ್ವಭಾವವೇ ಈ ರೀತಿ ಇರುತ್ತದೆ. ಇನ್ನು ಲಗ್ನದಿಂದ ಸ್ವಭಾವವನ್ನು ಹಾಗೂ ಎರಡನೇ ಮನೆ ವಾಕ್ ಸ್ಥಾನ ಆಗಿರುತ್ತದೆ, ಇದರ ಮೂಲಕ ವ್ಯಕ್ತಿಯ ಮಾತಿನ ರೀತಿ ಹಾಗೂ ಅವನ ಹಣಕಾಸಿನ ವ್ಯವಸ್ಥೆಯನ್ನು ತಿಳಿದುಕೊಳ್ಳಬಹುದು, ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಚಂದ್ರ ಯಾವ ಸ್ಥಾನದಲ್ಲಿ ಇದ್ದಾನೆ ಎಂಬುವುದರ ಮೂಲಕ ತಿಳಿದುಕೊಳ್ಳಬಹುದು. ಇನ್ನು ಐದನೇ ಮನೆ ಪೂರ್ವ ಪುಣ್ಯ ಸ್ಥಾನ ಎನ್ನಲಾಗುತ್ತದೆ, ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಪುಣ್ಯದ ಫಲಾಫಲವನ್ನು ನೋಡಿ ಕೆಲವು ಮುಖ್ಯ ವಿಚಾರದ ಬಗ್ಗೆ ತಿಳಿದುಕೊಳ್ಳಬಹುದು. ಇನ್ನು ಅತಿ ಮುಖ್ಯವಾಗಿ ಮಕ್ಕಳ ಜಾತಕದ ಜೊತೆಗೆ ತಂದೆ-ತಾಯಿಯ ಜಾತಕವ ಕೂಡ ಮುಖ್ಯವಾಗಿರುತ್ತದೆ, ತಂದೆ ತಾಯಿಯ ಜನ್ಮ ಜಾತಕದಲ್ಲಿ ಲಗ್ನದಿಂದ ಐದನೇ ಸ್ಥಾನ ಹೇಗಿದೆ ಎಂಬುದನ್ನು ನೋಡಬೇಕು, ಏಕೆಂದರೆ ಐದನೇ ಸ್ಥಾನ ಅಂದರೆ ಮಕ್ಕಳ ಬಗ್ಗೆ ತಿಳಿಸಿಕೊಡುವ ಸ್ಥಾನಇಲ್ಲಿ ಕೆಲವರಿಗೆ ಮಕ್ಕಳಿಂದ ದುಃಖ ಪಡುವ ಯೋಗ ಇರುತ್ತದೆ, ಅಷ್ಟೇ ಅಲ್ಲದೆ ತಂದೆ- ತಾಯಿಯ ಜಾತಕದಲ್ಲಿ ದೋಷ ಇದ್ದರೂ ಅದರ ಪರಿಣಾಮವನ್ನು ಮಕ್ಕಳು ಅನುಭವಿಸುತ್ತಾರೆ, ಆದ್ದರಿಂದ ಮಕ್ಕಳು ಹಾಗೂ ತಂದೆ ತಾಯಿ ಜಾತಕಗಳನ್ನು ಸಹ ಪರೀಕ್ಷಿಸಿ ಆ ನಂತರ ಅಗತ್ಯ ಇದ್ದಲ್ಲಿ ಪರಿಹಾರ ಮಾಡಿಸಿಕೊಳ್ಳಬೇಕು, ಕೆಲವು ಬಾರಿ ಗೋಚಾರ ಅಥವಾ ದಶಾ ಭುಕ್ತಿಯ ಕಾರಣಕ್ಕೆ ಸಮಸ್ಯೆ ಉದ್ಭವಿಸಿ, ಆ ನಂತರ ಅದು ನಿವಾರಣೆ ಆಗುತ್ತದೆ, ಇಂಥದ್ದಕ್ಕೆ ಹೆಚ್ಚು ಯೋಚಿಸುವ ಅಗತ್ಯ ಇಲ್ಲ. ಈ ರೀತಿಯಾಗಿ ಮಕ್ಕಳು ಮತ್ತು ತಂದೆ ತಾಯಿಯ ನಡುವೆ ಕಲಹಗಳು ಉಂಟಾಗಲು ಮಕ್ಕಳು ಹಠವನ್ನು ಮಾಡಲು ಜಾತಕದ ದೋಷಗಳು ಕೂಡ ಕಾರಣ ಆಗುತ್ತವೆ ಹಾಗೂ ಅವರ ಗ್ರಹಗತಿಗಳ ಸ್ಥಾನವು ಕೂಡ ಕಾರಣವಾಗುತ್ತದೆ.

Also Read  ಅಬಕಾರಿ ಅಧಿಕಾರಿಗಳಿಂದ ಕಳ್ಳಭಟ್ಟಿಯ ವಿರುದ್ದ ಜನಜಾಗೃತಿ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top