ಆಟೋ ಚಾಲಕ-ಮಾಲಕ ಸಂಘದಿಂದ ಆಂಬ್ಯುಲೆನ್ಸ್ ಸೇವೆ ಆರಂಭ ➤ ಮರ್ಧಾಳದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.23. ಮರ್ಧಾಳ ಸೌಹಾರ್ದ ಸಂಗಮ ಆಟೋ ಚಾಲಕ ಹಾಗೂ ಮಾಲಕರ ಸಂಘದ ವತಿಯಿಂದ ಆಂಬ್ಯುಲೆನ್ಸ್ ಸೇವೆಗೆ ಶನಿವಾರದಂದು ಮರ್ಧಾಳದಲ್ಲಿ ಚಾಲನೆ ನೀಡಲಾಯಿತು.

ಅಸ್ಸಯ್ಯದ್ ಶಾಹುಲ್ ಹಮೀದ್ ತಂಙಳ್ ಮರ್ಧಾಳ ನೂತ‌ನ ಆಂಬ್ಯುಲೆನ್ಸ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮರ್ಧಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಕೋಡಂದೂರು, ಸೌಹಾರ್ದ ಸಂಗಮ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ಕೆ., ಕಾರ್ಯದರ್ಶಿ ಹೈದರ್ ಹಿಂದುಸ್ತಾನ್, ಜೀಪ್ ಚಾಲಕ ಮಾಲಕರ ಸಂಘದ ಸುರೇಶ್ ನೈಲ, ಸೇರಿದಂತೆ ಆಟೋ ಚಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.

Also Read  ಸವಣೂರು :ಅಭಿಷೇಕ್ ಎನ್ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ

error: Content is protected !!
Scroll to Top