ಕ್ಯಾಂಪಸ್ ಫ್ರಂಟ್ ಮಂಗಳೂರು ಗ್ರಾಮಾಂತರ ವತಿಯಿಂದ ಉಚಿತ ಸ್ಕಾಲರ್ ಶಿಪ್ ಅಭಿಯಾನ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 23. ಕ್ಯಾಂಪಸ್ ಫ್ರಂಟ್ ಮಂಗಳೂರು ಗ್ರಾಮಾಂತರ ವತಿಯಿಂದ ಉಚಿತ ಸ್ಕಾಲರ್ ಶಿಪ್ ಅಭಿಯಾನವು ಕಾವೂರು ಜಂಕ್ಷನ್ ಹಾಗೂ ಮುಲ್ಕಿಯಲ್ಲಿ ನಡೆಯಿತು.

1ನೇ ತರಗತಿಯಿಂದ ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಪ್ರೀ ಮೆಟ್ರಿಕ್, ಪೋಸ್ಟ್ ಮೆಟ್ರಿಕ್ ಹಾಗೂ ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನದ ಅರ್ಜಿಯನ್ನು ಉಚಿತವಾಗಿ ಸಲ್ಲಿಸಲಾಯಿತು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಅಧ್ಯಕ್ಷರಾದ ಅಶ್ರಫ್ ಪೊರ್ಕೋಡಿ, ಕಾವೂರು ಏರಿಯಾ ನಾಯಕರು, ಮುಲ್ಕಿ ಏರಿಯಾ ನಾಯಕರು ಹಾಗೂ ಹಲವಾರು ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

Also Read  ಕ್ರಿಯಾಶೀಲರಾಗಿಲು ಕ್ರೀಡೆ ನೆರವು ➤ ಡಿಸಿ ರವಿಕುಮಾರ್

error: Content is protected !!
Scroll to Top