ದೆವ್ವದ ವೇಷ ಧರಿಸಿ ಹೆದರಿಸಲು ಹೋದ ಯುವತಿಗೆ ಗುಂಡೇಟು..! ➤ ದಾರುಣ ಅಂತ್ಯ

(ನ್ಯೂಸ್ ಕಡಬ) Newskadaba.com ಮೆಕ್ಸಿಕೋ, ಅ. 23. ದೆವ್ವದ ವೇಷ ಧರಿಸಿ, ಸಾರ್ವಜನಿಕರನ್ನು ಹೆದರಿಸಲು ಹೋದ ಯುವತಿಯೋರ್ವಳು ಅನ್ಯಾಯವಾಗಿ ತನ್ನ ಪ್ರಾಣ ಕಳೆದುಕೊಂಡ ಘಟನೆ ಮೆಕ್ಸಿಕೋದ ನೌಕಲ್ಪಾನ್ ಡಿ ಜುವಾರೆಜ್ ಎಂಬಲ್ಲಿ ನಡೆದಿದೆ.

ರಾತ್ರಿಯಲ್ಲಿ ದೆವ್ವದಂತೆ ವೇಷ ಧರಿಸಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಇದನ್ನು ಕಂಡ ವ್ಯಕ್ತಿಯೋರ್ವ ಹೆದರಿ ಒಂದೇ ಸಮನೆ ನಾಲ್ಕೈದು ಗುಂಡು ಹಾರಿಸಿದ್ದು, ಪರಿಣಾಮ ಯುವತಿ ಮೃತಪಟ್ಟ ಘಟನೆ ನಡೆದಿದೆ. ಬಿಳಿ ಸೀರೆಯುಟ್ಟು ದೆವ್ವದಂತೆ ಮೇಕಪ್ ಮಾಡಿ ಯುವತಿಯು ರಸ್ತೆಯ ಬದಿಯಲ್ಲಿದ್ದು, ಈ ವೇಳೆ ವ್ಯಕ್ತಿಯು ಹೆದರಿ ಒಂದೇ ಸಮನೆ ನಾಲ್ಕೈದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈಕೆ “ಲಾ ಲೊರೋನಾ” ಎಂಬ ದೆವ್ವದ ಕಥೆಯನ್ನಾಧರಿಸಿ ಈ ವೇಷ ಧರಿಸುತ್ತಿದ್ದಳೆನ್ನಲಾಗಿದೆ. ಗುಂಡು ಹಾರಿಸಿದ ವ್ಯಕ್ತಿಯು ಸ್ಥಳದಿಂದ ಪರಾರಿಯಾಗಿದ್ದಾನೆ.

Also Read  ಮಸ್ಕಿಯಲ್ಲಿ 'ಕೈ'ಗೆ ಜೈ ಅಂದ ಮತದಾರ ➤ ಕಾಂಗ್ರೆಸ್ ನ ಬಸನಗೌಡ ತುರುವಿಹಾಳ್ ಜಯಭೇರಿ

error: Content is protected !!
Scroll to Top