ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ➤ 3ಚಿನ್ನ, 1 ಬೆಳ್ಳಿ ಗೆದ್ದ ಕರಾವಳಿಯ ಕುವರಿ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 23. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಅಪೇಕ್ಷಾ ಫೆರ್ನಾಂಡೀಸ್‌ 3ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದಿದ್ದಾರೆ.

ಪ್ರಸ್ತುತ ಮುಂಬೈನಲ್ಲಿ ವಾಸವಾಗಿರುವ ಮಂಗಳೂರಿನ ಬಾವ್ಲಾನ್ ಹಾಗೂ ಶಾಲೇಟ್ ಫೆರ್ನಾಂಡೀಸ್ ದಂಪತಿಯ ಪುತ್ರಿ 16 ವರ್ಷದ ಅಪೇಕ್ಷಾ ಫೆರ್ನಾಂಡೀಸ್‌ ಬಂಟ್ಸ್ ಸಂಘದ ಎಸ್.ಎಂ. ಶೆಟ್ಟಿ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಪೂವಾಯಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ. ಅಪೇಕ್ಷಾ ಐಐಟಿ ಬಾಂಬೆ ಪೂಲ್ ಹಾಗೂ ಹಿರಾನಂದನಿ ಫಾರೆಸ್ಟ್ ಕ್ಲಬ್‍ನಲ್ಲಿ ಡಾ. ಮೋಹನ್ ರೆಡ್ಡಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಅಪೇಕ್ಷಾ ಅವರು 15-17 ವರ್ಷದೊಳಗಿನ ವರ್ಗ-1ರ ಅಡಿಯಲ್ಲಿ ಜೂನಿಯರ್ ರಾಷ್ಟ್ರಗಳಲ್ಲಿ ಭಾಗವಹಿಸಿದ್ದು, ಮೂರು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಪಡೆದಿದ್ದಾರೆ. ಅ. 26ರಿಂದ 29ರವರೆಗೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿಯೂ ಭಾಗವಹಿಸಲಿದ್ದಾರೆ. ಅಪೇಕ್ಷಾ 200 ಮೀಟರ್ ವೈಯಕ್ತಿಕ ಮಿಡ್‍ ರಿಲೆ, 50 ಮೀಟರ್ ಬ್ರೆಸ್ ಸ್ಟ್ರೋಕ್, 200 ಮೀಟರ್ ಬಟರ್‍ಪ್ಯಾಯ್ ಸ್ಟ್ರೋಕ್, 100 ಮೀಟರ್ ಬಟರ್‍ಪ್ಯಾಯ್ ಸ್ಟ್ರೋಕ್‍ನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಪ್ರಸ್ತುತ, ಅವರು ಮಹಾರಾಷ್ಟ್ರ ತಂಡಕ್ಕಾಗಿ 200 ಮೀಟರ್, 50 ಮೀಟರ್ ಮತ್ತು 4100 ಮೀಟರ್ ಮಿಡ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದು ರಾಷ್ಟ್ರೀಯ ದಾಖಲೆ ಗಳಿಸಿದ್ದಾರೆ.

Also Read  ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾರೀ ಮುನ್ನಡೆ ➤ 8ನೇ ಸುತ್ತಿನಲ್ಲಿ ಭಾಗೀರಥಿ ಮುರುಳ್ಯಗೆ 11,974 ಮತಗಳ ಮುನ್ನಡೆ

error: Content is protected !!
Scroll to Top