ಉಪ್ಪಿನಂಗಡಿ: ಬೈಕ್ – ಮಿನಿ ಟೆಂಪೋ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.19. ಮೀನು ಸಾಗಾಟದ ಟೆಂಪೋ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತೊಟ್ಟು ಸಮೀಪದ ಸನ್ನಂಪಾಡಿಯಲ್ಲಿ ನಡೆದಿದೆ.

ಮೃತ ಸವಾರನನ್ನು ಮಂಗಳೂರು ಸಮೀಪದ ಕುಂಟಲ್ಪಾಡಿ ಪದವು ನಿವಾಸಿ ಸಚಿನ್(29ವ.) ಎಂದು ಗುರುತಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ತಲೆಯ ಮೇಲೆ ಮೀನು ಸಾಗಾಟದ ಟೆಂಪೋ ಹರಿದಿದ್ದು, ಘಟನೆಯಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Also Read  ಉಡುಪಿ: 'ಇಸ್ಕಾನ್ ಧಾರ್ಮಿಕ ನಾಯಕರ ಬಂಧನ ಖಂಡನೀಯ'- ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

 

 

 

 

error: Content is protected !!
Scroll to Top