“ನಮಗೆ ಎಲ್ಲೂ ಹೆಣ್ಣು ಸಿಗುತ್ತಿಲ್ಲ, ನಮಗೆ ಮದುವೆ ಮಾಡಿಸಿ..!” ➤ 7 ಯುವಕರಿಂದ ಜಿಲ್ಲಾಧಿಕಾರಿಗೆ ಪತ್ರ

(ನ್ಯೂಸ್ ಕಡಬ) Newskadaba.com ತುಮಕೂರು, ಅ. 17. ರೈತ ಎಂಬ ಕಾರಣಕ್ಕೆ ನಮ್ಮನ್ನು ಮದುವೆ ಮಾಡಿಕೊಳ್ಳಲು ಯಾರೂ ಒಪ್ಪುತ್ತಿಲ್ಲ, ಹಾಗಾಗಿ ನಮಗೆ ಮದುವೆ ಮಾಡಿಸಿ ಎಂದು ಏಳು ಮಂದಿ ಯುವ ರೈತರು ಜಿಲ್ಲಾಧಿಕಾರಿಗೆ ಪತ್ರ ಬರೆದ ವಿಚಿತ್ರ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ.

ತಿಮ್ಲಾಪುರ ಗ್ರಾಮದ ಏಳು ರೈತ ಯುವಕರು ಜಿಲ್ಲಾಧಿಕಾರಿಗೆ ಪತ್ರ ಬರೆದು, ನಾವು ರೈತರಾದುದರಿಂದ ನಮಗೆ ಎಲ್ಲೂ ಹೆಣ್ಣು ಸಿಗುತ್ತಿಲ್ಲ. ಆದ್ದರಿಂದ ನಮ್ಮ ಸಮಸ್ಯೆಯನ್ನು ಪರಿಗಣಿಸಿ ಮದುವೆ ಮಾಡಿಸಬೇಕು ಎಂದು ಪತ್ರದ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.

Also Read  ‘ನಾ’ ನಾಯಕಿ ಸಮಾವೇಶ ➤ಬೆಂಗಳೂರಿಗೆ ಇಂದು ಪ್ರಿಯಾಂಕಾ ಗಾಂಧಿ ಆಗಮನ!

error: Content is protected !!