ಪತಿಗೆ ಅಕ್ರಮ ಸಂಬಂಧ..! ➤ ಶೂಟ್ ಮಾಡಿ ಕೊಂದು ಮೃತದೇಹವನ್ನು ತುಂಡರಿಸಿ 3 ಸೂಟ್ ಕೇಸ್ ನಲ್ಲಿ ಸಾಗಾಟ- ದೃಶ್ಯ ಸಿಸಿಟಿವಿಯಲ್ಲಿ ಸೆರೆ ➤➤ ಪತ್ನಿ ಅರೆಸ್ಟ್

(ನ್ಯೂಸ್ ಕಡಬ) Newskadaba.com ಬ್ರೆಸಿಲಿಯಾ, ಅ. 16. ತನ್ನ ಗಂಡನನ್ನೇ ಕೊಂದು ಮೃತ ದೇಹವನ್ನು ಸೂಟ್‍ಕೇಸ್‍ನಲ್ಲಿರಿಸಿ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

ಕೊಲೆಯಾದವರನ್ನು ಮಾರ್ಕೋಸ್ ಮಟ್ಸುನಾಗಾ ಎಂದು ಗುರುತಿಸಲಾಗಿದೆ. ಪತ್ನಿ ಎಲೀಟ್ ಮುಟ್ಸುನಾಗಾ ಪತಿಯನ್ನು ಕೊಲೆ ಮಾಡಿದ್ದಾಳೆ. ಆಕೆ ತನ್ನ ಪತಿಯ ಮೇಲಿನ ಸಿಟ್ಟು ತೀರಿಸಲು ಕೊಲೆ ಮಾಡಿದ್ದು, ನಂತರ ಮೃತದೇಹವನ್ನು ತುಂಡು ತುಂಡು ಮಾಡಿ ಸೂಟ್‍ ಕೇಸ್‍ನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ ಎನ್ನಲಾಗಿದೆ. ಎಲೀಟ್ ಮನೆಯವರ ಹಾಗೂ ತನ್ನಿಚ್ಛೆಯಂತೆ ಮಾರ್ಕೋಸ್‍ ನನ್ನು ಮದುವೆಯಾಗಿದ್ದು, ಅಲ್ಲದೇ ಗಂಡ ಬೇರೊಬ್ಬ ಯುವತಿ ಜೊತೆಗೆ ಸಂಬಂಧದಲ್ಲಿದ್ದನು. ಈ ವಿಚಾರವಾಗಿ ನೊಂದ ಎಲೀಟ್ ತನ್ನ ಪತಿಯನ್ನೇ ಮುಗಿಸಲು ಪ್ಲಾನ್ ಮಾಡಿಕೊಂಡ ಆಕೆ ಒಂದು ದಿನ ರೂಮಿನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಗಂಡನಿಗೆ ಶೂಟ್ ಮಾಡಿ, ಸತ್ತ ಗಂಡನ ಶವನನ್ನು ಮನೆಯಿಂದ ಹೊರ ಹಾಕಲು ತುಂಡು ತುಂಡಾಗಿ ಕತ್ತರಿಸುತ್ತಾಳೆ. ನಂತರ 3 ಸೂಟ್‍ಕೇಸ್‍ನಲ್ಲಿ ತುಂಬಿಸಿ ಬೇರೆ ಕಡೆಗೆ ಸಾಗಾಟ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸೂಟ್‍ಕೇಸ್‍ನಲ್ಲಿ ಮೃತದೇಹ ಇರುವುದು ಪತ್ತೆಯಾಗಿದೆ.

Also Read  ಜಿಮ್ ಮೇಲ್ಛಾವಣಿ ಕುಸಿತ -10 ಮಂದಿ ಮೃತ್ಯು

 

error: Content is protected !!
Scroll to Top