ಪುತ್ತೂರು: ಅನ್ಯಕೋಮಿನ ವ್ಯಕ್ತಿಯಿಂದ ಯುವಕನ ಮೇಲೆ ಅತ್ಯಾಚಾರ..! ➤ ವ್ಯಕ್ತಿ ಅರೆಸ್ಟ್

(ನ್ಯೂಸ್ ಕಡಬ) Newskadaba.com ಪುತ್ತೂರು, ಅ. 16. 67 ವರ್ಷದ ವ್ಯಕ್ತಿಯಿಂದ ಯುವಕನೋರ್ವನ ಮೇಲೆ ಅತ್ಯಾಚಾರ ನಡೆದ ವಿಚಿತ್ರ ಘಟನೆ ಪುತ್ತೂರಿನ ಮುರ ಎಂಬಲ್ಲಿ ನಡೆದಿದೆ.


20 ವರುಷದ ಯುವಕನೋರ್ವನ ಮೇಲೆ ಮುರ ನಿವಾಸಿ ಮಹಮ್ಮದ್ ಹನೀಫ್ (67) ಎಂಬಾತ ಬಲಾತ್ಕಾರ ಮಾಡಿ ಅತ್ಯಾಚಾರ ನಡೆಸಿರುವುದಾಗಿ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯವೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದ ಪ್ರಕರಣಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ಇದಕ್ಕೆ ವಿರುದ್ಧವಾಗಿ ವ್ಯಕ್ತಿಯೋರ್ವ ತನ್ನದೇ ಲಿಂಗಕ್ಕೆ ಸೇರುವವರ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣ ಇದೀಗ ಆತಂಕವನ್ನು ಉಂಟುಮಾಡುವಂತಿದೆ. ಘಟನೆಗೆ ಸಂಬಂಧಿಸಿ ಯುವಕನ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ ಎನ್ನಲಾಗಿದೆ.

Also Read  ಮಂಗಳೂರು : ಶಾಸಕ ಯು.ಟಿ ಖಾದರ್ ಗೆ ವಂಚಿಸಲು ಯತ್ನ..!!      ➤ ಆರೋಪಿಯ ವಿರುದ್ದ ದೂರು ದಾಖಲು              

error: Content is protected !!
Scroll to Top