ಸುಬ್ರಹ್ಮಣ್ಯ: ಶಟಲ್ ಆಡಲೆಂದು ತೆರಳುತ್ತಿದ್ದ ವೇಳೆ ಕಡವೆಗೆ ಢಿಕ್ಕಿ ಹೊಡೆದ ಬೈಕ್ ➤ ಕುಮಾರಸ್ವಾಮಿ ಶಾಲೆಯ ಹೆಡ್ ಕ್ಲರ್ಕ್ ಸ್ಥಳದಲ್ಲೇ ದುರ್ಮರಣ

(ನ್ಯೂಸ್ ಕಡಬ) Newskadaba.com ಸುಬ್ರಹ್ಮಣ್ಯ, ಅ. 16. ಶಟಲ್ ಆಡಲೆಂದು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಕಡವೆಗೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ನಡೆದಿದೆ‌.

ಮೃತರನ್ನು ಕುಮಾರಸ್ವಾಮಿ ಶಾಲೆಯ ಹೆಡ್ ಕ್ಲರ್ಕ್ ರಾಮಚಂದ್ರ ಅರ್ಬಿತ್ತಾಯ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯದ ಗಾಂಗೇಯ ಕ್ರಿಕೆಟ್ ತಂಡದ ಆಟಗಾರರಾಗಿದ್ದ ಇವರು, ಪ್ರತಿನಿತ್ಯದಂತೆ ಕುಲ್ಕುಂದದ ಸೋಮಶೇಖರ್ ಎಂಬವರ ಮನೆಗೆ ಶಟಲ್ ಆಡಲು ಬೆಳಿಗ್ಗೆ 5:45ರ ಸಮಯ ತನ್ನ ಸಹೋದನೊಂದಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪರಿಣಾಮ ರಾಮಚಂದ್ರ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹೋದರನಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

Also Read  ಕರಾವಳಿಯಲ್ಲಿ ಭಾರೀ ಮಳೆ- ಧರೆಗುರುಳಿದ 10 ವಿದ್ಯುತ್ ಕಂಬಗಳು

error: Content is protected !!
Scroll to Top