ಕಡಬ: ‘ಝೂಬಿ ಗೋಲ್ಡ್’ ವಿಸ್ತೃತ ಚಿನ್ನಾಭರಣ ಮಳಿಗೆ ಶುಭಾರಂಭ ➤ ಶುಭಾರಂಭದ ಪ್ರಯುಕ್ತ ವಿಶೇಷ ಆಫರ್, ಲಕ್ಕೀ ಕೂಪನ್ ಡ್ರಾ

(ನ್ಯೂಸ್ ಕಡಬ) newskadaba.com ಕಡಬ, ಅ.14. ಕಳೆದ ಐದು ವರ್ಷಗಳಿಂದ ಇಲ್ಲಿನ ಮುಖ್ಯ ರಸ್ತೆಯ ಬಾಬು ಟವರ್ ನಲ್ಲಿ ಕಾರ್ಯಾಚರಿಸುತ್ತಿದ್ದ ಚಿನ್ನಾಭರಣ ಮಳಿಗೆ ‘ಝೂಬಿ ಗೋಲ್ಡ್’ ವಿಸ್ತೃತಗೊಂಡು ಗುರುವಾರದಂದು ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಅಸ್ಸಯ್ಯಿದ್ ಮುಹ್ಸಿನ್ ಸಯ್ಯದ್ ಅಲವಿ ಕೋಯ ಅಲ್ ಬುಖಾರಿ ತಂಙಳ್ ಕಲ್ಲೇರಿಯವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ, ಕಡಬ ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರು ರೆ.ಫಾ.ಅರುಣ್ ವಿಲ್ಸನ್ ಲೋಬೋ, ಅಸ್ಸಯ್ಯಿದ್ ಶಾಹುಲ್‌ ಹಮೀದ್ ತಂಙಳ್ ಮರ್ಧಾಳ, ಕಟ್ಟಡದ ಮಾಲಕರಾದ ದಯಾನಂದ ನಾಯ್ಕ್ ಮೇಲಿನಮನೆ ಆಗಮಿಸಿ ಶುಭಹಾರೈಸಿದರು.

ನೂತನ ಮಳಿಗೆಯಲ್ಲಿ 100% ಪರಿಶುದ್ಧ BIS ಹಾಲ್ ಮಾರ್ಕ್‌ನ 916 ಆಭರಣಗಳನ್ನು ಕನಿಷ್ಟ ತಯಾರಿಕಾ ವೆಚ್ಚದಲ್ಲಿ ನೀಡಲಾಗುತ್ತಿದ್ದು, ಅಂತರಾಷ್ಟ್ರೀಯ ಗುಣಮಟ್ಟದ ವಜ್ರಾಭರಣಗಳು ಲಭ್ಯವಿರಲಿದೆ. ತೂಕದ ಕಡಿತವಿಲ್ಲದೆ ಶುದ್ಧ 916 ಚಿನ್ನದ ವಿನಿಮಯ ಯೋಜನೆ, ಆಭರಣಗಳಿಗೆ ಜೀವನಪರ್ಯಂತ ಸರ್ವಿಸ್ ಮತ್ತು (ಬೈ-ಬ್ಯಾಕ್) ಮರು ಖರೀದಿಯ ಸದವಕಾಶವನ್ನು ಕಲ್ಪಿಸಲಾಗಿದೆ. ಮುಂಗಡ ಬುಕ್ಕಿಂಗ್ ವ್ಯವಸ್ಥೆಯೊಂದಿಗೆ ಅತ್ಯುನ್ನತ ಶಾಪಿಂಗ್ ಅನುಭವ ನೀಡುವ ನುರಿತ ಮಾರಾಟ ಪ್ರತಿನಿಧಿಗಳು 100% ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಜೊತೆಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಿದ್ದಾರೆ. ಮದುವೆ ಖರೀದಿದಾರರಿಗೆ ವಿಶೇಷ ರಿಯಾಯಿತಿಯ ಅವಕಾಶ ನೀಡಲಾಗಿದ್ದು, ಬ್ಯಾಂಕಿನಲ್ಲಿ ಅಡವಿಟ್ಟ ಬಂಗಾರವನ್ನು ಅತ್ಯಧಿಕ ಬೆಲೆಗೆ ಖರೀದಿಸಲಾಗುವುದು. ಅಲ್ಲದೇ ನೋವಿಲ್ಲದ ಪಂಚಿಂಗ್ ಗನ್ ಬಳಸಿ ಮಕ್ಕಳ ಕಿವಿ ಆಭರಣ ಚುಚ್ಚಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

Also Read  ವಕೀಲೆ ನೇಣು ಬಗಿದುಕೊಂಡು ಆತ್ಮಹತ್ಯೆ -ಕಾರಣ ನಿಗೂಢ

ಮಾಲಕರಾದ ಯೂನುಸ್ ಕೋಡಿಕಂಡ ಹಾಗೂ ಸಾದಿಕ್ ಕೋಡಿಕಂಡ ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು. ಶುಭಾರಂಭದ ಅಂಗವಾಗಿ ಲಕ್ಕೀ ಕೂಪನ್ ಡ್ರಾ ಆಯೋಜಿಸಲಾಗಿದ್ದು, ಸಂಜೆ ವೇಳೆಗೆ ನೆರೆದ ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಅದೃಷ್ಟ ಫಲಿತಾಂಶದಲ್ಲಿ ಕೋಡಿಂಬಾಳ ಸಮೀಪದ ಮಣಿಮುಂಡ ನಿವಾಸಿ ಝರ್ಕ ಚಿನ್ನದ ರಿಂಗನ್ನು ತನ್ನದಾಗಿಸಿಕೊಂಡಿದ್ದಾರೆ.

Also Read  ಕಡಬ: 108 ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

error: Content is protected !!
Scroll to Top