ತಾಯಿ ಫಿಜ್ಜಾ ಕೊಡಲು ತಡವಾಯಿತೆಂದು‌ ಆತ್ಮಹತ್ಯೆಗೆ ಶರಣಾದ ಮಗಳು

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಅ. 14. ತಾನು ಕೇಳಿದ ಸಮಯಕ್ಕೆ ಪಿಜ್ಜಾ ಸಿಗಲಿಲ್ಲ ಎಂಬ ಕಾರಣಕ್ಕೆ ತಾಯಿ ಮೇಲೆ ಕೋಪಗೊಂಡ ನರ್ಸಿಂಗ್​ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ತಾಲಬ್ ಪುರ ಪ್ರದೇಶದ ನಿವಾಸಿ ಶಿಖಾ ಸೋನಿ (18) ಎಂದು ಗುರುತಿಸಲಾಗಿದೆ. ಈಕೆ ತನಗೆ ಪಿಜ್ಜಾ ಬೇಕು ಎಂದು ತಾಯಿಯ ಬಳಿ ಕೇಳಿದಾಗ, ಇದಕ್ಕೆ ಆಕೆಯ ತಾಯಿ ಸ್ವಲ್ಪ ಸಮಯ ಕಾಯಬೇಕು ಎಂದಿದ್ದಾರೆ. ಈ ಕಾರಣದಿಂದ ಕೋಪಗೊಂಡ ಶಿಖಾ ತನ್ನ ಕೋಣೆಗೆ ತೆರಳಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Also Read  ಮಂಗಳೂರು: ಕರ್ಫ್ಯೂ ಉಲ್ಲಂಘಿಸಿ ಸಿಪಿಐನಿಂದ ಪ್ರತಿಭಟನೆ

error: Content is protected !!
Scroll to Top