ಕಬ್ಬು ಸಾಗಾಟದ ಟ್ರ್ಯಾಕ್ಟರ್ ನಲ್ಲಿ ಕಾಲು ಸಿಲುಕಿ ಬಾಲಕನ ಸ್ಥಿತಿ ಗಂಭೀರ

(ನ್ಯೂಸ್ ಕಡಬ) Newskadaba.com ಹುಬ್ಬಳ್ಳಿ, ಅ. 14. ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಅಪಘಾತದಲ್ಲಿ ಬಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ಬಾಲಕನನ್ನು ಗಣೇಶ ಹನುಮಂತಪ್ಪ ವಡ್ಡರ(11) ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್ ನಲ್ಲಿ ಕಬ್ಬು ತುಂಬಿಸಿ ತರುತ್ತಿದ್ದ ಸಂದರ್ಭ ಬಾಲಕನ ಬಲಗಾಲು ಸಿಲುಕಿಕೊಂಡಿದ್ದು, ಪರಿಣಾಮ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಚಿಕಿತ್ಸೆಗಾಗಿ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾ‌ನೆ ಎಂದು ತಿಳಿದುಬಂದಿದೆ.

Also Read  ಓಂ ಶ್ರೀ ನರಸಿಂಹಸ್ವಾಮಿ ನೆನೆಯುತ್ತ ಹಿಂದಿನ ದಿನ ಭವಿಷ್ಯ ವನ್ನು ತಿಳಿದುಕೊಳ್ಳಿ ಈ ಐದು ರಾಶಿಯವರಿಗೆ ಶುಭಫಲ ದೊರೆಯುತ್ತದೆ ಕಷ್ಟಗಳು ಪರಿಹಾರ ಆಗುತ್ತದೆ

error: Content is protected !!
Scroll to Top