ಮಂಗಳೂರು: ಅ.16ರಿಂದ ಮಾಲ್, ಮಾರ್ಕೆಟ್ ಹೋಗಬೇಕಾದರೆ ಲಸಿಕೆ ಕಡ್ಡಾಯ ➤ ಮಹಾನಗರ ಪಾಲಿಕೆಯಿಂದ ಕಟ್ಟಿನಿಟ್ಟಿನ ಆದೇಶ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ.14. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆಯಾದರೂ, ಹಬ್ಬ ಹರಿದಿನಗಳ ಸಂದರ್ಭವಾದ್ದರಿಂದ ಪ್ರಕರಣಗಳು ಏರುವ ಸಾಧ್ಯತೆ ಕೂಡಾ ಹೆಚ್ಚಿದೆ. ಈ ನಿಟ್ಟಿನಲ್ಲಿ ಮೂರನೇ ಅಲೆಯ ಆತಂಕವನ್ನು ತಪ್ಪಿಸಲು, ಇದೀಗ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳದವರನ್ನು ಗುರುತಿಸಿ, ಲಸಿಕೆ ಕೊಡಿಸುವ ಕೆಲಸ ಮಾಡಲಾಗಿದೆ. ಲಸಿಕೆ ಹಾಕಿಸಿಕೊಳ್ಳದಿದ್ದಲ್ಲಿ ಅ.16 ರಿಂದ ಮಾಲ್ ಹಾಗೂ ಮಾರ್ಕೆಟ್ ಸಹಿತ ಎಲ್ಲಾ ಸಾರ್ವಜನಿಕ ಸ್ಥಳ ಸೇರಿದಂತೆ ಸಾರ್ವಜನಿಕರಿಗೆ ಲಸಿಕೆ ಪಡೆದ ದಾಖಲೆ ಇಲ್ಲದೆ, ಓಡಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Also Read  ಭಾರೀ ಅಗ್ನಿ ಅನಾಹುತಕ್ಕೆ ಸುಟ್ಟು ಭಸ್ಮವಾದ ಗ್ಯಾರೆಜ್

error: Content is protected !!
Scroll to Top