ಉಪ್ಪಿನಂಗಡಿ: ತಾಯಿ- ಮಗು ಮೇಲೆ ಬಸ್ ಹರಿದು ಮೃತ್ಯು ಪ್ರಕರಣದ ಹಿನ್ನೆಲೆ ➤ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಹಾಗೂ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹ

(ನ್ಯೂಸ್ ಕಡಬ) Newskadaba.com ಉಪ್ಪಿನಂಗಡಿ, ಅ. 14. ಕಳೆದ ಎರಡು ದಿನದ ಹಿಂದೆ ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ತಾಯಿ ಮತ್ತು ಮಗು ಮೇಲೆ ಬಸ್ ಹರಿದು ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿದ್ದು, ಇದಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ತೀವ್ರ ಸಂತಾಪ ಸೂಚಿಸುತ್ತಿದೆ ಮತ್ತು ಬಸ್ಸು ಚಾಲಕನ ಬೇಜವಾಬ್ದಾರಿಯನ್ನು ಖಂಡಿಸುತ್ತದೆ.

ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಮಂಗಳೂರು ಪ್ರಯಾಣಿಸುವ ಪ್ರಯಾಣಿಕರು ಅವಲಂಬಿಸುವ ಪ್ರಮುಖ ಬಸ್ ನಿಲ್ದಾಣ ಇದಾಗಿದ್ದು, ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹಳ ಸಂಖ್ಯೆಯಲ್ಲಿ ಈ ಒಂದು ಬಸ್ ನಿಲ್ದಾಣದ ಮೂಲಕ ಇತರ ಸ್ಥಳಗಳಿಗೆ ಪ್ರಯಾಣಿಸುವುದರಿಂದ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಾಣದ ಅವಶ್ಯಕತೆ ಇದೆ. ಚಾಲಕನ ಅಜಾಗರೂಕತೆಯಿಂದ ಕಳೆದ ದಿನದ ಎರಡು ಜೀವ ಸೇರಿ ಈಗಾಗಲೇ ನಾಲ್ಕು ಜೀವಗಳು ನಿಲ್ದಾಣದೊಳಗಿನ ಅಪಘಾತದಲ್ಲಿ ಜೀವವನ್ನು ತೆತ್ತಿದ್ದು, ಬಸ್ ನಿಲ್ದಾಣದ ಅವ್ಯವಸ್ಥೆಯಿಂದ ಇನ್ನೆಷ್ಟು ಜೀವ ಬಲಿಯಾಗಬೇಕಿದೆ. ಇದಕ್ಕಿಂತ ಮೊದಲು ಗ್ರಾಮ ಪಂಚಾಯತ್ ಎಚ್ಚೆತ್ತುಕೊಂಡು ಬಸ್ ನಿಲ್ದಾಣವನ್ನು ನಿರ್ಮಿಸಬೇಕಾಗಿದೆ. ಅದೇ ರೀತಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಕಾರ್ಯದರ್ಶಿ ಮರ್ಝೂಕ್ ಕೋಲ್ಪೆ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮಂಗಳೂರು: ರೈಲಿನಡಿಗೆ ತಲೆಯಿಟ್ಟು ವ್ಯಕ್ತಿ ಆತ್ಮಹತ್ಯೆ..!

error: Content is protected !!
Scroll to Top