ರಾಯಲ್ ಫ್ರೆಂಡ್ಸ್ ಗೂನಡ್ಕ ವತಿಯಿಂದ ನರೇಶ್ ಬೈಲೆ ಮೂರ್ನಾಡು ರವರಿಗೆ ಸನ್ಮಾನ

(ನ್ಯೂಸ್ ಕಡಬ) Newskadaba.com ಸುಳ್ಯ, ಅ. 14. ರಾಯಲ್ ಫ್ರೆಂಡ್ಸ್ ಗೂನಡ್ಕ ಸ್ಪೋರ್ಟ್ಸ್ & ಕಲ್ಚರಲ್ ಸೆಂಟರ್ ವತಿಯಿಂದ ‘ವನ್ಯ ಜೀವಿಗಳನ್ನು ಸಂರಕ್ಷಿಸೋಣ’ ಎಂಬ ಏಕ ವ್ಯಕ್ತಿ ಆಂದೋಲನದ ರೂವಾರಿ ಮೂರ್ನಾಡಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆ ಯಾತ್ರೆ ಕೈಗೊಂಡ ನರೇಶ್ ಬೈಲೇ ರವರನ್ನು ರಾಯಲ್ ಫ್ರೆಂಡ್ಸ್ ಗೂನಡ್ಕ ವತಿಯಿಂದ ಕನ್ನಡದ ಶಾಲು, ಗಂಧದ ಮಾಲೆ ಹಾಗೂ ಉಡುಗೊರೆ ನೀಡಿ ಸನ್ಮಾನಿಸಲಾಯಿತು.

 


ಈ ಸಂಧರ್ಭದಲ್ಲಿ ರಾಯಲ್ ಫ್ರೆಂಡ್ಸ್ ಗೂನಡ್ಕ ಅಧ್ಯಕ್ಷರಾದ ಸಾಜೀದ್.ಐ.ಜಿ, ಗೌರವಾದ್ಯಕ್ಷರಾದ ಅಶ್ರಫ್ ಟರ್ಲಿ, ಸಾಮಾಜಿಕ ಮುಖಂಡ ಸಲೀಂ ದರ್ಕಾಸ್ ಗೂನಡ್ಕ, ಮನೀಶ್ ಗೂನಡ್ಕ, ಫಾರೂಕ್ ಕಾನಕ್ಕೋಡ್, ಸಿರಾಜುದ್ದೀನ್ (ಇಚ್ಚು) ಗೂನಡ್ಕ, ಅಝರ್ ಗೂನಡ್ಕ, ಅಹಮದ್ ಚೆಮ್ನಾಡ್, ಉಬೈಸ್ ಟಿ.ಕೆ ಗೂನಡ್ಕ, ಶರೀಫ್ ಸೆಟ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು.

Also Read  ಮುತ್ತೂರು ಗ್ರಾಮ ಸಭೆ

error: Content is protected !!
Scroll to Top