ಕೋಳಿ ಅಂಗಡಿಯ ಮುಂದೆ ಕುಳಿತಿದ್ದ ಇಬ್ಬರ ಮೇಲೆ ಹರಿದ ಲಾರಿ- ಸ್ಥಳದಲ್ಲೇ ಮೃತ್ಯು ➤ ಬೆಳ್ಳಂಬೆಳಗ್ಗೆ ನಡೆದ ದುರ್ಘಟನೆ

(ನ್ಯೂಸ್ ಕಡಬ) Newskadaba.com ಮಂಡ್ಯ, ಅ. 14. ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಅಂಗಡಿ ಬಳಿ ಕುಳಿತಿದ್ದವರ ಮೇಲೆ ಹರಿದು, ಇಬ್ಬರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರನ್ನು ಕೀಳಘಟ್ಟ ಗ್ರಾಮದ ಗಿರೀಶ್ ಶೆಟ್ಟಿ (50) ಮತ್ತು ಕೋಡಿ ಹಳ್ಳಿ ಗ್ರಾಮದ ಲೋಕೇಶ (44) ಎಂದು ಗುರುತಿಸಲಾಗಿದೆ. ಗಿರೀಶ್ ಶೆಟ್ಟಿ ಎಂಬವರು ಸ್ಥಳದಲ್ಲೇ ಮೃತಪಟ್ಟರೆ, ಲೋಕೇಶ್ ಎಂಬವರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೋಳಿ ಅಂಗಡಿಯ ಮಾಲೀಕ ನಿಂಗೇಗೌಡ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಈ ಕುರಿತು ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುಳ್ಯ: ಯುವ ಸಾಹಿತಿ ಸಮ್ಯಕ್ತ್ ಹೆಚ್. ಜೈನ್ ಗೆ ರಾಜ್ಯ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ

error: Content is protected !!
Scroll to Top