ಉಪ್ಪಿನಂಗಡಿ: ತಾಯಿ – ಮಗು ಬಲಿಪಡೆದ ಅಪಘಾತ ಪ್ರಕರಣ ➤ ಸೋಶಿಯಲ್ ಮೀಡಿಯಾದಲ್ಲಿ ವಿಕೃತಿ ಮೆರೆದು ಕಮೆಂಟ್ ಹಾಕಿದ ಆನಂದ್ ವಿರುದ್ದ ಎಸ್ಡಿಪಿಐ ಉಪ್ಪಿನಂಗಡಿ ವತಿಯಿಂದ ದೂರು ದಾಖಲು

(ನ್ಯೂಸ್ ಕಡಬ) Newskadaba.com ಉಪ್ಪಿನಂಗಡಿ,‌ ಅ. 13. ಮಂಗಳವಾರದಂದು ಉಪ್ಪಿನಂಗಡಿ ಬಸ್ಸು ನಿಲ್ದಾಣದಲ್ಲಿ ಸಾಹಿದಾ(25) ಹಾಗೂ ಅವರ ಒಂದು ವರ್ಷದ ಮಗು ಸಾಹಿಲ್ ನಡೆದಾಡಿಕೊಂಡು ಹೋಗುತ್ತಿರುವಾಗ ಕೆ.ಎಸ್.ಅರ್.ಟಿ.ಸಿ ಬಸ್ಸು ಚಾಲಕನ ಅಜಾಗರೂಕತೆಯಿಂದ ಬಸ್ಸಿನಡಿಗೆ ಬಿದ್ದು ಅಪಘಾತದ ತೀವ್ರತೆಗೆ ತಾಯಿ ಹಾಗೂ ಮಗು ಸ್ಥಳದಲ್ಲೇ ಜೀವ ಕಳೆದುಕೊಂಡಿದನ್ನು ಸೋಶಿಯಲ್ ಮೀಡಿಯಾದಲ್ಲಿ ವಿಕೃತವಾಗಿ ಕಾಮೆಂಟ್ ಹಾಕಿ ಸಂಭ್ರಮಿಸಿದ ಡ್ರೈವರ್ ಆನಂದ್ ಎಂಬವನ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಉಪ್ಪಿನಂಗಡಿ ಬ್ಲಾಕ್ ಸದಸ್ಯರಾದ ಇಕ್ಬಾಲ್ ಕೆಂಪಿ ದೂರು ದಾಖಲಿಸಿದರು.

Also Read  ಬೈಕಂಪಾಡಿ: ತಾಳೆ ಎಣ್ಣೆ ಸಾಗಾಟದ ಲಾರಿ ಚಾಲಕನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ► ಚಾಲಕನನ್ನು ಕೊಂದು ಲಾರಿಯಲ್ಲಿದ್ದ ಸ್ವತ್ತು ದೋಚಿದ ದುಷ್ಕರ್ಮಿಗಳು..!!

ಈ ಸಂದರ್ಭದಲ್ಲಿ ಝಕರಿಯ್ಯಾ ಕೊಡಿಪ್ಪಾಡಿ, ಮುಸ್ತಫಾ ಲತೀಫಿ, ಅಬ್ದುಲ್ ಮಜೀದ್ ಮಠ, ಹಸೈನಾರ್ ಉಪ್ಪಿನಂಗಡಿ ನಿಯೋಗದಲ್ಲಿದ್ದರು.

error: Content is protected !!
Scroll to Top