ಮೇಕೆಯನ್ನು ರಕ್ಷಿಸಲು ಹೋದ ಯುವಕ ಕೆರೆಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) Newskadaba.com ಕೆ.ಆರ್.ಪೇಟೆ, ಅ. 13. ಕೆರೆಗೆ ಬಿದ್ದು ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೇಕೆರೆ ಗ್ರಾಮದಲ್ಲಿ ನಡೆದಿದೆ.

 

ಮೃತನನ್ನು ರಾಕೇಶ್ (17) ಎಂದು ಗುರುತಿಸಲಾಗಿದೆ. ಈತನು ಸಾಕಿದ್ದ ಮೇಕೆಯೊಂದನ್ನು ನಾಯಿ ಹಿಡಿಯಲು ಬಂದಿದ್ದು, ಇದರಿಂದ ಹೆದರಿದ ಮೇಕೆಯು ಕೆರೆಗೆ ಹಾರಿದೆ. ಮೇಕೆಯನ್ನು ರಕ್ಷಿಸಲೆಂದು ಈತನು ಕೆರೆಗೆ ಹಾರಿದ್ದಾನೆ. ಮೇಕೆ ಈಜಿ ದಡ ಸೇರಿದ್ದು, ಆದರೆ ರಾಕೇಶ್ ಮೃತಪಟ್ಟಿದ್ದಾನೆ. ಈ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕೊರೋನಾ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ತೆರೆಯದಿರಿ ➤ ಎಸ್ಕೆಎಸ್ಸೆಸ್ಸೆಫ್ ಮನವಿ

 

 

error: Content is protected !!
Scroll to Top