ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ➤ ನಾಲ್ವರ ಬಂಧನ, ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

(ನ್ಯೂಸ್ ಕಡಬ) Newskadaba.com ರಾಮನಗರ, ಅ. 13. ವಿವಿಧ ಕಡೆ ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತರನ್ನು ಹೊಡಿಕೆ ಹೊಸಹಳ್ಳಿ ಗ್ರಾಮದ ಎಚ್‌.ಎಂ. ಆತ್ಮಾನಂದ್ (40), ಮಳೂರುಪಟ್ಟಣ ನಿವಾಸಿ ಎಂ. ಸಿ. ಮನು (39), ರಾಮನಗರದ ವಿವೇಕಾನಂದ ನಗರ ನಿವಾಸಿ ಎಸ್‌. ಕೃಷ್ಣಮೂರ್ತಿ ಹಾಗೂ ಚೆನ್ನಪಟ್ಟಣದ ಎಂ.ಜಿ. ರಸ್ತೆ ಸಮೀಪದ ನಿವಾಸಿ ನಾಗಾರ್ಜುನ (31) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಸಂದೀಪ್‌ ತಲೆಮರೆಸಿಕೊಂಡಿದ್ದಾರೆ. ಈ ಸಂದರ್ಭ ಬಂಧಿತರಿಂದ ₹10.98 ಲಕ್ಷ ನಗದು, ಹುಂಡೈ ಕಾರು, 2 ಟಿ.ವಿ. ಸೆಟ್‌ ಅಪ್ ಬಾಕ್ಸ್‌ಗಳು, 8 ಮೊಬೈಲ್‌ ಹಾಗೂ ಎಟಿಎಂ ಕಾರ್ಡ್‌ಗಳನ್ನು ವಶಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Also Read  ➤5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು ವಿಚಾರ ➤ ಮಾರ್ಚ್ 14ಕ್ಕೆ‌ ವಿಚಾರಣೆ ಮುಂದೂಡಿದ ಹೈಕೋರ್ಟ್

error: Content is protected !!
Scroll to Top