ಮನೆಗೆ ತಡವಾಗಿ ಬಂದ 10ರ ಬಾಲಕಿ ➤ ಕೋಲಿನಿಂದ ಹೊಡೆದು ಕೊಂದ ಪಾಪಿ ತಂದೆ..!

(ನ್ಯೂಸ್ ಕಡಬ) Newskadaba.com ಮಧ್ಯಪ್ರದೇಶ, ಅ. 12. ರಾತ್ರಿ ವೇಳೆ ಮನೆಗೆ ತಡವಾಗಿ ಬಂದಳೆಂಬ ಕಾರಣಕ್ಕೆ ತನ್ನ ಹತ್ತು ವರ್ಷದ ಮಗಳನ್ನು ಕೋಲಿನಿಂದ ಹಿಗ್ಗಾಮುಗ್ಗಾ ಹೊಡೆದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಮೊರೆನಾದ ಉತ್ತಮ್ ಪುರಂ ಎಂಬಲ್ಲಿ ನಡೆದಿದೆ.

ನೆರೆಮನೆಯ ಗೆಳತಿಯರೊಂದಿಗೆ ದುರ್ಗಾ ಪೂಜೆಗೆ ತೆರಳಿದ್ದ ಆಕೆ, ಮನೆಗೆ ಮರಳುವಾಗ ತಡವಾಗಿತ್ತು. ಇದರಿಂದ ಸಿಟ್ಟಿಗೆದ್ದ ತಂದೆ ರಾಕೇಶ್ ಜಾತವ್ ಕೋಲಿನಿಂದ ಮನಬಂದಂತೆ ಹೊಡೆದಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತನಿಖೆಯ ವೇಳೆ ಆರೋಪಿ ತಂದೆ ಜಾತವ್ ಕುಡಿತದ ಚಟ ಹೊಂದಿದ್ದು, ದಿನನಿತ್ಯ ಪತ್ನಿ‌ ಹಾಗೂ ಮಗಳಿಗೆ ಕಿರುಕುಳ ಕೊಡುತ್ತಿದ್ದ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ.

Also Read  ಜಾಗದ ವಿಚಾರ- ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದು, ಬೆದರಿಕೆಯೊಡ್ಡಿದ ಪುತ್ರಿಯರು..! ➤ ದೂರು ದಾಖಲು

 

error: Content is protected !!
Scroll to Top