ವಿಧವೆ ಮಹಿಳೆಯ ಮೇಲೆ ಯುವಕನಿಂದ ಅತ್ಯಾಚಾರ

(ನ್ಯೂಸ್ ಕಡಬ) Newskadaba.com ಮೇದಿನಿ ನಗರ, ಅ. 12. ವಿಧವೆ ಅತ್ತಿಗೆಯ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿದ ಘಟನೆ ಜಾರ್ಖಂಡ್‌ನ ಪಲಮು ಜಿಲ್ಲೆಯ ಮೇದಿನಿ ನಗರದಲ್ಲಿ ನಡೆದಿದೆ.

ರಾತ್ರಿ ವೇಳೆ ಮದ್ಯ ಸೇವಿಸಿ ಬಂದಿದ್ದ ಆರೋಪಿಯು ಅತ್ತಿಗೆಯ ಪ್ರತಿರೋಧದ ನಡುವೆಯೂ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಸಂತ್ರಸ್ತೆ ಮಹಿಳೆಯ ಪತಿಯು ಮೂರು ವರ್ಷದ ಹಿಂದೆ ಮೃತಪಟ್ಟಿದ್ದು, ಈ ಹಿನ್ನೆಲೆ ಕೃತ್ಯವೆಸಗಿದ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ ಎಂದೆನ್ನಲಾಗಿದೆ. ಸಂತ್ರಸ್ತೆಯ ಹೇಳಿಕೆಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

Also Read  ಕಾರ್ಗಿಲ್ ನಲ್ಲಿ ದೇಶ ಕಾಪಾಡಿದ ನನಗೆ ಪತ್ನಿಯನ್ನು ಕಾಪಾಡಲು ಆಗಲಿಲ್ಲ- ದುಃಖ ತೋಡಿಕೊಂಡ ನಗ್ನ ಸಂತ್ರಸ್ತೆಯ ಪತಿ

error: Content is protected !!
Scroll to Top