ಕಡಬ: ಗೃಹರಕ್ಷಕ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯಕ್ರಮ

(ನ್ಯೂಸ್ ಕಡಬ) Newskadaba.com ಕಡಬ, ಅ. 12. ತಾಲೂಕಿನ ಸರಕಾರಿ‌ ಹಿರಿಯ ಪ್ರಾಥಮಿಕ ಶಾಲಾ ಆವರಣದ ಸ್ವಚ್ಛತಾ ಕಾರ್ಯಕ್ರಮವು ಗೃಹರಕ್ಷಕ ದಳದ ವತಿಯಿಂದ ನಡೆಯಿತು.

ಕಡಬ ಮಾದರಿ ಹಿ,ಪ್ರಾ. ಶಾಲೆಯ ಮುಖ್ಯಗುರುಗಳಾದ ಹಮೀದ್ ರವರು, ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ| ಮುರಳಿ ಮೋಹನ್ ಚೂಂತಾರು ಅವರು ಭೇಟಿ ನೀಡಿ ಗೃಹರಕ್ಷಕರ ಕುಂದು ಕೊರತೆಗಳನ್ನು ಆಲಿಸಿದರು. ಸ್ವಚ್ಛತಾ ಕಾರ್ಯಕ್ರಮದ ಸಂದರ್ಭದಲ್ಲಿ ಸೆಕ್ಷನ್ ಲೀಡರ್ ಉದಯಶಂಕರ್, ವಾಣಿ, ಮೋನಪ್ಪ, ರವಿ, ಮೀನಾಕ್ಷಿ, ಪ್ರಮಿತ, ಕುಸುಮ, ಪವೀತ್ ಮೊದಲಾದವರು ಉಪಸ್ಥಿತರಿದ್ದರು. ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಅಮೈ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ರವರಿಗೆ ಗೌರವ ವಂದನೆ ಸಲ್ಲಿಸಿದರು.

Also Read  ಉಡುಪಿ : ಹೊಸ ವರ್ಷಾಚರಣೆಗೆ ಜಿಲ್ಲೆಯಲ್ಲಿ ಪ್ರತ್ಯೇಕ ಕಾನೂನು ಜಾರಿ

error: Content is protected !!
Scroll to Top