ಪತ್ನಿಗೆ ಹಾವಿನಿಂದ ಕಚ್ಚಿಸಿ ಹತ್ಯೆಗೈದ ಪಾಪಿ ಪತಿ..! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) Newskadaba.com ಕೇರಳ, ಅ. 12. ಸ್ವತಃ ಪತಿಯೇ ತನ್ನ ಪತ್ನಿಯ ಮೇಲೆ ವಿಷಪೂರಿತ ಹಾವೊಂದನ್ನು ಬಿಟ್ಟು ಸಾಯಿಸಿದ ಘಟನೆ ಕೊಲ್ಲಂನಲ್ಲಿ ನಡೆದಿದೆ.


ಕೆಲ ತಿಂಗಳ ಹಿಂದೆ ಆಕೆಗೆ ವಿಷಕಾರಿಯಲ್ಲದ ಹಾವೊಂದು ಕಡಿದಿದ್ದು, ಇದಕ್ಕಾಗಿ ಆಕೆಯು ಕೆಲವು ಔಷಧಿಗಳನ್ನು ಮಾಡಿಕೊಳ್ಳುತ್ತಿದ್ದಳು. ಇದನ್ನೇ ನೆಪವಾಗಿಸಿಕೊಂಡ ಪತಿ ಸೂರಜ್‌, ಆಕೆಯ ಔಷಧಿಯಲ್ಲಿ ನಿದ್ರೆಯ ಮಾತ್ರೆ ಬೆರೆಸಿ, ಅದನ್ನು ಸೇವಿಸಿ ಗಾಢ ನಿದ್ರೆಯಲ್ಲಿದ್ದ ಪತ್ನಿಗೆ ವಿಷಕಾರಿ ನಾಗರಹಾವನ್ನು ತಂದು ಕಚ್ಚಿಸಿದ್ದಾನೆ. ಬಳಿಕ ಆಕೆಗೆ ನೈಸರ್ಗಿಕವಾಗಿ ಹಾವು ಕಚ್ಚಿ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಿ ಕುಟುಂಬಸ್ಥರ ಜೊತೆ ಅನುಕಂಪ ಗಿಟ್ಟಿಸಿಕೊಂಡಿದ್ದಾನೆ. ಆದರೆ, ಪೊಲೀಸರ ತನಿಖೆ ವೇಳೆ ಹಾವು ಕಚ್ಚಿರುವ ಜಾಗದಲ್ಲಿನ ಗುರುತು 2.3-2.8 ಸೆಂ.ಮೀ ಅಗಲವಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡದ ಹರಿಶಂಕರ್‌ ಅವರು, ವೈಜ್ಞಾನಿಕ ಆಧಾರಗಳನ್ನು ಕಲೆಹಾಕಲು ಮುಂದಾಗಿದ್ದಾರೆ. ಮರಣೋತ್ತರ ಪರೀಕ್ಷಾ ತಜ್ಞರಿಗೆ ತಮ್ಮ ಅನುಮಾನಗಳ ಬಗ್ಗೆ ಹರಿಶಂಕರ್‌ ವಿವರಿಸಿದ್ದಾರೆ. ಈ ಕುರಿತು ಕೂಲಂಕುಷವಾಗಿ ತಪಾಸಣೆ ನಡೆಸಿದಾಗ ಪತ್ನಿಯ ಹೊಟ್ಟೆಯಲ್ಲಿ ನಿದ್ರೆ ಮಾತ್ರೆಯ ಅವಶೇಷಗಳು ಸಿಕ್ಕಿವೆ. ಜತೆಗೆ ನೈಸರ್ಗಿಕವಾಗಿ ಹಾವು ಕಚ್ಚಿದರೆ ಕೇವಲ 1.7-1.8 ಸೆ.ಮೀ ಮಾತ್ರವೇ ಅಗಲವಾದ ಗಾಯ ಇರುತ್ತದೆ ಎಂದು ತಜ್ಞರು ಪೊಲೀಸರಿಗೆ ವಿವರಿಸಿದ್ದಾರೆ. ಇದರಿಂದ ಪೊಲೀಸರ ಅನುಮಾನಗೊಂಡು ಪತಿ ಸೂರಜ್‌ನನ್ನು ವಶಕ್ಕೆ ಪಡೆದು, ತನಿಖೆ ನಡೆಸಿದಾಗಿ ನಿಜ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

Also Read  ದಂಪತಿಗಳ ನಡುವೆ ಸಂಬಂಧ ಉತ್ತಮವಾಗಿರಬೇಕು ವೈವಾಹಿಕ ಜೀವನ ಚೆನ್ನಾಗಿರಬೇಕು ಎನ್ನುವವರು ಈ ವಿಧಾನ ಅನುಸರಿಸಿ ಕಷ್ಟಗಳು ಪರಿಹಾರವಾಗುತ್ತದೆ

error: Content is protected !!
Scroll to Top