ಸ್ವತಃ ಪೊಲೀಸರಿಂದಲೇ ಗಾಂಜಾ ಮಾರಾಟ ➤ ಇನ್ಸ್‌ಪೆಕ್ಟರ್ ಸಹಿತ 7 ಮಂದಿ ಅಮಾನತು

(ನ್ಯೂಸ್ ಕಡಬ) Newskadaba.com ಹುಬ್ಬಳ್ಳಿ, ಅ. 12. ಪೊಲೀಸರೇ ಸ್ವತಃ ಗಾಂಜಾ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ಸ್ ಪೆಕ್ಟರ್ ಸೇರಿದಂತೆ 7 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.


ಗಾಂಜಾ ಸಾಗಾಣಿಕೆ ಕುರಿತ ಖಚಿತ ಮಾಹಿತಿ ಪಡೆದ ನವನಗರ ಠಾಣಾ ಪೊಲೀಸರು ಗಾಂಜಾ ಮಾರಾಟಗಾರನ್ನು ಬಂಧಿಸಿ, ಬಳಿಕ ಪ್ರಕರಣ ದಾಖಲಿಸದೇ ಹಣ ಪಡೆದು, ಆರೋಪಿಗಳ‌ನ್ನ ವಾಪಾಸು ಕಳುಹಿಸಿದ್ದರು. ಜೊತೆಗೆ ಸೀಜ್ ಮಾಡಲಾಗಿದ್ದ 1 ಕೆಜಿ ಗಾಂಜಾವನ್ನು ಸ್ವತಃ ಪೊಲೀಸರೇ ಮಾರಾಟ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ಹೀಗಾಗಿ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಸಿ, ನವನಗರ ಠಾಣಾ ಇನ್ಸ್‌ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್‌ಐ ವಿಕ್ರಮ ಪಾಟೀಲ್ ಸೇರಿದಂತೆ 7 ಮಂದಿ ಪೊಲೀಸರನ್ನು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

Also Read  ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಮೃತ್ಯು ➤  40 ಕ್ಕೂ ಹೆಚ್ಚು ಜನರು ಅಸ್ವಸ್ಥ             

error: Content is protected !!
Scroll to Top