ಎಡೆಬಿಡದೆ ಸುರಿಯತ್ತಿರುವ ಮಳೆ: ಕಳಾರ ಶಾಲಾ ಕಟ್ಟಡ ಕುಸಿತ

(ನ್ಯೂಸ್ ಕಡಬ) newskadaba.com ಕಡಬ, ಜೂ.10. ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕಳಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವೊಂದು ಕುಸಿದಿರುವ ಘಟನೆ ಶನಿವಾರದಂದು ನಡೆದಿದೆ.

ಕಟ್ಟಡವು ಶಿಥಿಲಗೊಂಡಿದ್ದರಿಂದ ಪಕ್ಕದ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನಡೆಯುತ್ತಿತ್ತೆನ್ನಲಾಗಿದೆ. ಆದರೆ ಬೇರೆ ತರಗತಿಗಳಿಗೆ ಹೊಂದಿಕೊಂಡ ಈ ಕಟ್ಟಡದ ಬಳಿಯಿಂದಾಗಿ ವಿದ್ಯಾರ್ಥಿಗಳು ಸಾಗುತ್ತಿದ್ದರು. ಶನಿವಾರದಂದು ಬೆಳಗ್ಗಿನ ಜಾವ ಘಟನೆ ನಡೆದಿದ್ದು, ಆ ಸಮಯದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದಿದ್ದುದರಿಂದ ಅನಾಹುತ ತಪ್ಪಿದೆ. 1997ರಲ್ಲಿ ಸ್ಥಾಪಿಸಲಾದ ಕಟ್ಟಡವು ಅಕ್ರಮ ಕಾಮಗಾರಿಯಿಂದಾಗಿ ಶಿಥಿಲಗೊಂಡಿದ್ದು, ಅದನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು 2011ರಿಂದ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ನೀಡಲಾಗಿತ್ತು. ತದನಂತರ ಆ ಕಟ್ಟಡವನ್ನು 69 ಸಾವಿರ ರೂ.ಗಳಿಗೆ ಏಲಂ ನಡೆಸಬೇಕೆಂದು ಶಿಕ್ಷಣ ಇಲಾಖೆಯಿಂದ ಆದೇಶವಾಗಿತ್ತು. ನಿಗದಿಪಡಿಸದ ಮೌಲ್ಯ ಅಧಿಕವಾಗಿದ್ದರಿಂದ ಏಲಂ ಪ್ರಕ್ರಿಯೆ ನಡೆಯದೇ ಶಿಕ್ಷಣ ಇಲಾಖೆಯು ಪುನಃ ಪರಿಶೀಲಿಸಿ 33 ಸಾವಿರ ರೂ.ಗಳಿಗೆ ಇಳಿಸಿತ್ತು. ಆದರೂ ಏಲಂ ಪ್ರಕ್ರಿಯೆಗೆ ಯಾರೂ ಮುಂದೆ ಬಂದಿರಲಿಲ್ಲ. ಈ ಗ್ಗೆ ಕಳೆದ ಗ್ರಾಮ ಸಭೆಯಲ್ಲೂ ಚರ್ಚೆಗಳಾಗಿದ್ದವು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಪ್ರಾಣದ ಜೊತೆ ಚೆಲ್ಲಾಟವಾಡದೆ ಕುಸಿದು ಬಿದ್ದಿರುವ ಹಳೆಯ ಕಟ್ಟಡವನ್ನು ಶೀಘ್ರದಲ್ಲೇ ತೆರವುಗೊಳಿಸಬೇಕಾಗಿದೆ. ಸ್ಥಳಕ್ಕೆ ಕಡಬ ಗ್ರಾ.ಪಂ.ಸದಸ್ಯ ಹಾಜಿ ಹನೀಫ್ ಕೆ.ಎಂ., ಎಸ್.ಡಿ.ಎಂ.ಸಿ. ಅಧ್ಯಕ್ಷ ಇಸ್ಮಾಯಿಲ್ ಕೆ.ಎಚ್., ಶಾಲಾ ಮುಖ್ಯೋಪಾಧ್ಯಾಯರಾದ ಹಮೀದ್ ಮಾಸ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಅರಣ್ಯದಲ್ಲಿ ಆಕಸ್ಮಿಕ ಕಾಡ್ಗಿಚ್ಚು ಪ್ರಕರಣ ➤ಗಂಭೀರ ಗಾಯಗೊಂಡ ಸಿಬ್ಬಂದಿಯೋರ್ವ ಮೃತ್ಯು

ಶಾಲಾ ಕಟ್ಟಡವನ್ನು ತೆರವುಗೊಳಿಸದೇ ಇರುವುದಕ್ಕೆ ಶಿಕ್ಷಣ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯು ನೇರ ಹೊಣೆಯಾಗಿದೆ. ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ನೀಡಲಾಗಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಘಟನೆ ನಡೆದಿದೆ.
ಹಾಜಿ| ಹನೀಫ್ ಕೆ.ಎಂ., ಸದಸ್ಯರು, ಗ್ರಾ.ಪಂ.

error: Content is protected !!
Scroll to Top