ಮಂಗಳೂರು: ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ➤ 163 ಯುನಿಟ್ ರಕ್ತ ಸಂಗ್ರಹ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ.‌ 11. ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳೂರು ಬ್ಲಡ್ ಡೋನರ್ಸ್ ಆಶ್ರಯದಲ್ಲಿ ಅಕ್ಟೋಬರ್ 10ರಂದು ದೇರಳಕಟ್ಟೆಯ ಬಿಸಿಸಿ ಹಾಲ್‌ನಲ್ಲಿ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಅಮೀರ್ ತಂಙಳ್ ಕಿನ್ಯ ದುಆ ನೆರವೇರಿಸಿದರು. ಶಾಸಕ ಯು.ಟಿ ಖಾದರ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ ಡಾ. ಶಕೀಲ್ ಚಾರಿಟೇಬಲ್ ಟ್ರಸ್ಟ್ ಹಲವು ರೀತಿಯ ಸೇವೆಗಳನ್ನು ಮಾಡುತ್ತಾ ಬಂದಿದ್ದು, ಇದೀಗ ಆರೋಗ್ಯಕ್ಕೆ ಸಂಬಂಧಿಸಿದ ರಕ್ತದಾನ ಶಿಬಿರ ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಲಿ ಎಂದರು. ಎಸ್ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು‌. ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್, ರಕ್ತವು ಯಾವುದೇ ಜಾತಿ ಧರ್ಮಗಳ ಬೇಧವಿಲ್ಲದೆ ಜನರನ್ನು ರಕ್ಷಿಸುತ್ತದೆ. ಎಲ್ಲರ ಧರ್ಮದವರ ರಕ್ತವೂ ಒಂದೇ ಬಣ್ಣದಲ್ಲಿ ಇದೆ. ಹಾಗಾಗಿ ರಕ್ತದಾನವು ಒಂದು ಜೀವವನ್ನೇ ಉಳಿಸುವ ಕಾರ್ಯಕ್ರಮ ವಾಗಿದ್ದು, ಇದನ್ನು ಯುವಜನತೆ ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದರು.

Also Read  ಪುತ್ತೂರು: ಟಿಪ್ಪರ್ ಹಾಗೂ ಸಿಹಿತಿಂಡಿ ಸಾಗಾಟದ ಓಮ್ನಿ ನಡುವೆ ಢಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು


ಟ್ರಸ್ಟ್‌ನ ಸ್ಥಾಪಕಾಧ್ಯಕ್ಷರಾದ ಡಾ. ಅಬ್ದುಲ್ ಶಕೀಲ್ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಸಾಮಾಜಿಕ ಸೇವೆಯನ್ನು ಮಾಡಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೂ ನೆರವಾಗಿದೆ. ಮುಂದೆಯೂ ಇಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ದಿ ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ (ಲಿ) ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಂಗಳೂರು‌ ತಾ.ಪಂ. ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು,
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ರಾಜ್ಯಾಧ್ಯಕ್ಷ ಕೆ.ಕೆ ಶಾಹುಲ್ ಹಮೀದ್, ಬೆಳ್ಮ ಗ್ರಾ.ಪಂ ಅಧ್ಯಕ್ಷ ಬಿ.ಎಂ ಸತ್ತಾರ್, ಹರೇಕಳ ಗ್ರಾ.ಪಂ ಅಧ್ಯಕ್ಷ ಬದ್ರುದ್ದೀನ್,‌ ಬೆಳ್ಮ ಗ್ರಾ.ಪಂ ಅಭಿವೃದ್ದಿ ಅಧಿಕಾಧಿ ನವೀನ್ ಹೆಗ್ಡೆ, ಕೊಣಾಜೆ ಪೋಲೀಸ್ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ,
ಎಸ್ಡಿ.ಪಿಐ ಮುಖಂಡರಾದ ಅತಾವುಲ್ಲಾ ಜೋಕಟ್ಟೆ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಇಂಟೆಕ್ ನ ಪುನೀತ್ ಶೆಟ್ಟಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜಾ, ದೇರಳಕಟ್ಟೆ ಬದ್ರಿಯಾ ಜುಮಾ‌ ಮಸೀದಿ ಅಧ್ಯಕ್ಷ ಅಬೂಬಕ್ಕರ್ ನಾಟೆಕಲ್, ಬ್ಲಡ್ ಡೋನರ್ಸ್ ಮಂಗಳೂರು ರಿ ಸಂಸ್ಥೆಯ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಕಾರ್ಯದರ್ಶಿಗಳಾದ ನವಾಝ್ ನರಿಂಗಾನ, ಕಾರ್ಯನಿರ್ವಾಹಕ ಫಯಾಝ್ ಮಾಡೂರು, ಫಾರೂಕ್ ಜ್ಯೂಸ್ ರೊಮ್ಯಾಂಟಿಕ್, ಶಾಹುಲ್ ಕಾಶಿಪಟ್ನ, ರಝಾಕ್ ಸಾಲ್ಮರ, ಫರ್ಝಾನ್ ಸಿದ್ದಕಟ್ಟೆ, ನೌಫಲ್ ಬಜ್ಪೆ ಉಪಸ್ಥಿತರಿದ್ದರು.

Also Read  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ದರ ಹೆಚ್ಚಳಕ್ಕೆ ಸರ್ಕಾರ ಅಸ್ತು

ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಸುಮಾರು 163 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಈ ಸಂದರ್ಭ ರಾಷ್ಟೀಯ ಮಟ್ಟದ ಬ್ವಾಡಿಬಿಲ್ಡ್ ಪ್ರದರ್ಶನ ನಡೆಯಿತು. ರಕ್ತದಾನಿಗಳಿಗೆ ವಿಶೇಷ ಲಕ್ಕೀ ಡ್ರಾ ಕೂಪನ್ ವ್ಯವಸ್ಥೆ ಮಾಡಲಾಗಿದ್ದು, ಚೊಂಬುಗುಡ್ಡೆ ನಿವಾಸಿ ಇಮ್ತಿಯಾಝ್ ಸ್ಮಾರ್ಟ್ ಫೋನ್ ಬಹುಮಾನ ವಿಜೇತರಾದರು. ಟ್ರಸ್ಟ್‌ನ ಸಂಚಾಲಕ ನೌಫಲ್.ಬಿ ಸ್ವಾಗತಿಸಿದರು. ಟ್ರಸ್ಟಿ ಇಕ್ಬಾಲ್ ಎಚ್.ಆರ್ ವಂದಿಸಿದರು. ಯುವ ನ್ಯಾಯವಾದಿ ಗಝಾಲಿ ಕೆ.ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top