ಕಡಬ: ‘ಆಗ್ರೋ ಫರ್ಟಿಲೈಸ್’ ಗೊಬ್ಬರ ಮಾರಾಟ ಸಂಸ್ಥೆ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.11. ಇಲ್ಲಿನ ಮುಖ್ಯ ರಸ್ತೆಯ ವೆರೈಟಿ ಬಿಲ್ಡಿಂಗ್ ನಲ್ಲಿ ಕೃಷಿಗೆ ಸಂಬಂಧಿಸಿದ ಸಾವಯವ ಹಾಗೂ ರಾಸಾಯನಿಕ ಗೊಬ್ಬರ ಮಾರಾಟ ಸಂಸ್ಥೆ ಆಗ್ರೋ ಫರ್ಟಿಲೈಸ್ ಶನಿವಾರದಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಮಾಲಕರ ಮಾತೃಶ್ರೀಯವರು ಉದ್ಘಾಟಿಸಿದರು. ಕಡಬ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಯಶೋದಾ ಸೂಪರ್ ಶಾಪ್ ಮಾಲಕ ದಯಾನಂದ ಪ್ರಭು, ಉದ್ಯಮಿ ಅಜಿತ್ ಶೆಟ್ಟಿ, ಡಾ|ಸದಾನಂದ ರಾವ್, ಸಿಟಿ ಮೆಡಿಕಲ್ ನ ಶರೀಫ್, ಸ್ಟಾರ್ ಟ್ರೇಡಿಂಗ್ ನ ಶಗೀರ್ ಇಸ್ಮಾಯಿಲ್, ಸಿಟಿ ಫ್ಯಾಷನ್ ನ ಇಕ್ಬಾಲ್, ಪ್ರಮುಖರಾದ ಆದಂ ಕುಂಡೋಳಿ, ಅಶ್ರಫ್ ಶೇಡಿಗುಂಡಿ, ಗಣೇಶ್ ಕೈಕುರೆ, ನಾಗರಾಜ್ ಎನ್.ಕೆ., ತಿರುಮಲೇಶ್ ಭಟ್, ಮೋಹನ್ ಕೋಡಿಂಬಾಳ, ರಾಯಲ್ ಬೇಕರಿಯ ಮಹಮ್ಮದ್ ಕುಟ್ಟಿ, ಸಿನಾನ್ ನೆಟ್ಟಣ ಮೊದಲಾದವರು ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವೆರೈಟಿ ಸೆಂಟರ್ ನ ಅನ್ವರ್ ಅಹಮ್ಮದ್, ಮಾಲಕ ಝಫೀರ್ ಅಹಮದ್ ಅತಿಥಿಗಳನ್ನು ಸ್ವಾಗತಿಸಿದರು.

Also Read  ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಲ್ಲಿ ಕೋಟ್ಯಾಂತರ ರೂ. ಮರ ಕಳವು ಪ್ರಕರಣ | ಮನೆಗೆ ನುಗ್ಗಿ ದಾಂಧಲೆ ನಡೆಸಿದ ಅರಣ್ಯಾಧಿಕಾರಿಗಳ ವಿರುದ್ದ ನೀತಿ ತಂಡ ಹೋರಾಟ

ನೂತನ ಸಂಸ್ಥೆಯಲ್ಲಿ ಸುಫಲಾ, ಯೂರಿಯಾ, ಪೊಟ್ಯಾಷ್, ರಾಕ್ ಫಾಸ್ಪೇಟ್, ಇಫ್ಕೋ, ಎನ್.ಪಿ.ಕೆ., ಪ್ರೀಮಿಯಂ ಸಾವಯವ ಗೊಬ್ಬರ, ಮೈಲುತುತ್ತು ಹಾಗೂ ಕೀಟನಾಶಕಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.

error: Content is protected !!
Scroll to Top