ಮೇಲ್ಛಾವಣಿ ಮೂಲಕ ಮನೆಗೆ ನುಗ್ಗಲು ಪ್ರಯತ್ನಿಸಿದ ಅಪರಿಚಿತ ➤ ಮನೆಮಂದಿಯನ್ನು ಕಂಡು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಅ.10. ಮನೆಯೊಂದರ ಶೌಚಾಲಯದ ಮೇಲ್ಛಾವಣಿಯ ಮೂಲಕ ಅಪರಿಚಿತ ವ್ಯಕ್ತಿಯೋರ್ವ ಒಳ ನುಗ್ಗಲು ಪ್ರಯತ್ನಿಸಿರುವ ಘಟನೆ ಠಾಣಾ ವ್ಯಾಪ್ತಿಯ ಮರ್ಧಾಳದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಮರ್ಧಾಳದ 102 ನೆಕ್ಕಿಲಾಡಿ ಗ್ರಾಮದ ಅತ್ಲಾಜೆ ನಿವಾಸಿ ಹಮೀದ್ ಎಂಬವರ ಮನೆಯ ಶೌಚಾಲಯದ ಮೇಲ್ಛಾವಣಿಯ ಶೀಟ್ ಮೂಲಕ ಅಪರಿಚಿತ ವ್ಯಕ್ತಿಯೋರ್ವ ಒಳನುಗ್ಗಲು ಪ್ರಯತ್ನಿಸಿದ್ದು, ಈ ವೇಳೆ ಶೌಚಾಲಯಕ್ಕೆ ತೆರಳಿದ ಮಹಿಳೆಯೋರ್ವರು ಆತನನ್ನು ಗಮನಿಸಿ ಬೊಬ್ಬೆ ಹೊಡೆದಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯು ಪರಾರಿಯಾಗಿದ್ದು, ಶೌಚಾಲಯದ ಗೋಡೆಯ ಮೇಲೆ ಆತನ ಬೆರಳಚ್ಚು ಕಂಡುಬಂದಿದೆ.

Also Read  ಬಿಜೆಪಿ ಯುವ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ➤   ಎನ್ ಐಎಯಿಂದ ಮತ್ತಿಬ್ಬರ ವಿರುದ್ಧ ಚಾರ್ಜ್ ಶೀಟ್..!

 

 

 

error: Content is protected !!
Scroll to Top