ಕಡಬದ ಮೃತ ಬಾಲೆಯ ಹೆಸರಲ್ಲಿ ಕಲೆಕ್ಷನ್ ಮಾಡಿ ಸಿಕ್ಕಿಬಿದ್ದ ಭೂಪ ► ಬಡ ಮಕ್ಕಳ ಚಿಕಿತ್ಸೆಗೆ ನೆರವು ನೀಡುವಾಗ ಎಚ್ಚರವಿರಲಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ.01. ಹೆತ್ತವರು ಚಿಕಿತ್ಸೆಗೆ ನೆರವು ಯಾಚಿಸಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಕಳೆದ ಶುಕ್ರವಾರ ಮಂಗಳೂರಿನ ಆಸ್ಪತ್ರೆಯೊಂದ ರಲ್ಲಿ ಮೃತಪಟ್ಟಿದ್ದರೂ, ಆ ಬಾಲಕಿಯ ಹೆಸರು ಹೇಳಿಕೊಂಡು ಚಿಕಿತ್ಸೆಯ ನೆರವಿನ ನೆಪದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದ್ದ ವ್ಯಕ್ತಿಯೊಬ್ಬನ ವಂಚನೆ ಮಂಗಳವಾರ ಬಹಿರಂಗಗೊಂಡಿದ್ದು, ಆತನನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕದ ಯುವಕರು ಪತ್ತೆಹಚ್ಚಿ, ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ಕಡಬ ಸಮೀಪದ ಕೋಡಿಂಬಾಳ ಗ್ರಾಮದ ಕಲ್ಲಂದಡ್ಕ ಕುತ್ಯಾಡಿ ನಿವಾಸಿ ಕೂಲಿ ಕಾರ್ಮಿಕ ಇಸಾಕ್ ಎಂಬವರ ಪುತ್ರಿ ಶಹನಾಝ್ ಳ ಚಿಕಿತ್ಸೆಗೆ ಸುಮಾರು 8 ಲಕ್ಷ ಅಗತ್ಯವಿದ್ದು, ಸಹಾಯ ನೀಡುವಂತೆ ಈ ಕುಟುಂಬ ಪತ್ರಿಕೆಯ ಮೂಲಕ ಸಾರ್ವಜನಿಕರಿಗೆ ವಿನಂತಿಸಿದ್ದರು. ಬಾಲಕಿಯನ್ನು ಆ ಸಂದರ್ಭದಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಹನಾಝ್ ಅ. 24ರಂದು ಮೃತಪಟ್ಟಿದ್ದಳು.

ಈ ಬಗ್ಗೆ ಬಾಲಕಿಯ ತಾಯಿ ಪತ್ರಕರ್ತರಿಗೆ ಮೃತಪಟ್ಟಿರುವ ಮಾಹಿತಿಯನ್ನು ನೀಡಿದ್ದು, ಈ ವರದಿಯೂ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆದರೆ ಅ.25ರಂದು ಯುವಕನೋರ್ವ ಮೃತ ಬಾಲಕಿಯ ಮನೆಗೆ ಹೋಗಿ ನಿಮಗೆ ಮಂಗಳೂರಿನ ಸಂಸ್ಥೆಯೊಂದು ಹಣ ನೀಡಲಿದೆ. ಅದಕ್ಕಾಗಿ ಬಾಲಕಿಯ ಚಿಕಿತ್ಸೆಗೆ ವೈದ್ಯರು ನೀಡಿದ ದಾಖಲೆಗಳು ಹಾಗೂ ಔಷಧಿ ವೆಚ್ಚ ಇನ್ನಿತರ ದಾಖಲೆಗಳನ್ನು ನೀಡುವಂತೆ ಕೇಳಿಕೊಂಡಿದ್ದ. ಈ ಸಂದರ್ಭ ಮನೆ ಮಂದಿ ನಮ್ಮ ಮಗು ತೀರಿಕೊಂಡಿದೆ. ಇನ್ನು ನಮಗೆ ಹಣ ಬೇಡ ಎಂದರೂ ಕೇಳದೆ ಉಳಿದ ಮಕ್ಕಳಿಗೆ ಸಹಾಯವಾಗಬಹುದು ಎಂದು ಹೇಳಿ ಅವರನ್ನು ನಂಬಿಸಿ ಮಗುವಿನ ಔಷಧಿ ದಾಖಲೆಗಳನ್ನು ಪಡೆದುಕೊಂಡು ಹೋಗಿದ್ದ ಯುವಕ ಬಾಲಕಿಯ ಚಿಕಿತ್ಸೆಯ ದಾಖಲೆಗಳನ್ನು ಬಳಸಿಕೊಂಡು ವಂಚನೆಗಿಳಿದಿರುವುದು ಇದೀಗ ಬಹಿರಂಗಗೊಂಡಿದೆ.

Also Read  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತ್ಯು

ಬಾಲಕಿಯ ಚಿಕಿತ್ಸೆಗೆಂದು ಹೇಳಿ ಹಣ ಸಂಗ್ರಹ ನಡೆಸಲಾರಂಭಿಸಿದ್ದ ಈ ವಂಚಕ ಮಂಗಳವಾರ ಹಣ ಸಂಗ್ರಹಿಸಲು ಕಲ್ಲಡ್ಕ ಪರಿಸರಕ್ಕೆ ತೆರಳಿದ್ದ ಎನ್ನಲಾಗಿದ್ದು, ಹಣ ಸಂಗ್ರಹ ನಡೆಸುತ್ತಿದ್ದ ಸಂದರ್ಭ ಬಾಲಕಿಯ ಫೋಟೊ ನೋಡಿದ ಅಲ್ಲಿನ ಸ್ಥಳೀಯ ಯುವಕರಿಗೆ ಬಾಲಕಿ ಮೃತಪಟ್ಟಿರುವ ವಿಚಾರ ಪತ್ರಿಕೆಗಳಲ್ಲಿ ಬಂದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಿಸತೊಡಗಿದಾಗ ಆತ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದು, ಅಲ್ಲಿನ ಯುವಕರು ಆತನನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಆತನ ವಂಚನೆ ಬಹಿರಂಗವಾಯಿತು ಎಂದು ಯುವಕರು ತಿಳಿಸಿದ್ದಾರೆ.

Also Read  ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ► ಮನುಷ್ಯನಲ್ಲಿರುವ ರಾಕ್ಷಸಿ ಪ್ರವೃತ್ತಿ ಕಡಿಮೆಯಾಗಬೇಕು ►ವಿಶ್ವನಾಥ ರೈ

ತಾನು ಮೃತ ಬಾಲಕಿಯ ಮನೆಗೆ ತೆರಳಿ ಚಿಕಿತ್ಸೆಯ ದಾಖಲೆಗಳನ್ನು ಸಂಗ್ರಹಿಸಿ ಆಕೆಯ ಹೆಸರು ಹೇಳಿ ಹಣ ಸಂಗ್ರಹ ಮಾಡುತ್ತಿರುವುದನ್ನು ವಂಚಕ ಒಪ್ಪಿಕೊಂಡಿದ್ದು, ಸ್ಥಳೀಯ ಯುವಕರು ಆತನಲ್ಲಿದ್ದ ಎಲ್ಲಾ ದಾಖಲೆಗಳನ್ನುಪಡೆದುಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

error: Content is protected !!
Scroll to Top