ನೀರಿನ ಟ್ಯಾಪ್ ಓಪನ್ ಮಾಡಿ ದರೋಡೆ ಕಳ್ಳರ ಹೊಸ ತಂತ್ರ ➤ ಜಾಗರೂಕತೆಯಿಂದ ಇರುವಂತೆ ಬೆಳ್ಳಾರೆ ಎಸ್ಐ ಆಂಜನೇಯ ರೆಡ್ಡಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ.05. ರಾತ್ರಿ ಹೊತ್ತು ಮನೆಯ ಹೊರಗಿನ ನೀರಿನ ಟ್ಯಾಪ್ ಓಪನ್ ಮಾಡಿಟ್ಟು ಹೊರಬಂದ ವ್ಯಕ್ತಿಗೆ ಹಲ್ಲೆ ನಡೆಸಿ ಮನೆಯನ್ನು ದರೋಡೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಬೆಳ್ಳಾರೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ಸಾರ್ವಜನಿಕರಲ್ಲಿ ತಿಳಿಸಿದ್ದಾರೆ.

ರಾತ್ರಿ ಹೊತ್ತು ಮನೆಯ ಹೊರಗಿರುವ ನೀರಿನ ಟ್ಯಾಪ್ ಅಥವಾ ಇನ್ನಿತರ ಹೊರಗಿನ ಪೈಪ್ ಗಳಲ್ಲಿ ನೀರು ಹೋಗುವ ಶಬ್ದ ಕೇಳಿದರೆ ಏಕಾಏಕಿ ಹೊರ ಬರುವ ಪ್ರಯತ್ನ ಮಾಡದೆ ಗಮನಿಸುವುದು ಅನಿವಾರ್ಯವಾಗಿದೆ. ಮನೆಯಲ್ಲಿನ ನೀರು ಬಿಡುವುದು ಕಳ್ಳರ, ದರೋಡೆಕೋರರ ಹೊಸ ತಂತ್ರವಾಗಿದ್ದು, ಮನೆಯಲ್ಲಿರುವ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಆದಷ್ಟು ಜಾಗರೂಕತೆಯಿಂದ ಇರುವಂತೆ ಅವರು ಎಚ್ಚರಿಸಿದ್ದಾರೆ.

Also Read  ರಂಜಾನ್ ಹಿನ್ನೆಲೆ- ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ಕೊಡಿ ➤ ಮುಸ್ಲಿಂ ಮುಖಂಡರ ಮನವಿ

 

 

 

error: Content is protected !!
Scroll to Top