ಕುಕ್ಕೇ ಸೇರಿದಂತೆ ರಾಜ್ಯದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ➤ ಅರೆ ಬರೆ ಬಟ್ಟೆ ತೊಟ್ಟು ಆಗಮಿಸುವವರಿಗೆ ಬೀಳಲಿದೆ ಕಡಿವಾಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.05. ರಾಜ್ಯದ 216 ‘ಎ’ ಗ್ರೇಡ್ ದೇವಸ್ಥಾನಗಳಲ್ಲಿ ಇನ್ಮುಂದೆ ಬೇಕಾಬಿಟ್ಟಿಯಾಗಿ ವಸ್ತ್ರ ಧರಿಸುವುದಕ್ಕೆ ಕಡಿವಾಣ ಬೀಳಲಿದೆ.

ಕುಕ್ಕೇ ಸುಬ್ರಹ್ಮಣ್ಯ, ಕಟೀಲು, ಪೊಳಲಿ, ಮಂದಾರ್ತಿ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಬಗ್ಗೆ ಚರ್ಚೆಯಾಗುತ್ತಿದ್ದು, ಅರೆ ಬರೆ ಬಟ್ಟೆ ತೊಟ್ಟು ದೇವಾಲಯಕ್ಕೆ ಆಗಮಿಸುವವರಿಗೆ ನಿಷೇಧ ಹೇರಲಿದೆ. ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ಹೊರಬರಲಿದೆ ಎಂದು ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಮಾಹಿತಿ ನೀಡಿದ್ದಾರೆ.

Also Read  ವಿಧಾನಪರಿಷತ್ ಚುನಾವಣೆ ➤ ದ.ಕ. ಜಿಲ್ಲೆಯಲ್ಲಿ ಶ್ರೀನಿವಾಸ್ ಪೂಜಾರಿ ಹಾಗೂ ಮಂಜುನಾಥ್ ಭಂಡಾರಿಗೆ ಜಯ

 

 

 

error: Content is protected !!
Scroll to Top