ಅ.5 ರಂದು ಡಿ.ಕೆ. ಶಿವಕುಮಾರ್ ಸುಳ್ಯ ಕೋರ್ಟ್‌ಗೆ ಹಾಜರ್ ➤ ಕೊನೆಗೂ ಡಿಕೆಶಿ ಕರಾವಳಿ ಪ್ರವಾಸ ಫಿಕ್ಸ್

(ನ್ಯೂಸ್ ಕಡಬ) newskadaba.com ಸುಳ್ಯ, ಅ.03. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಕ್ಟೋಬರ್ 05 ರಂದು ಕರಾವಳಿಗೆ ಆಗಮಿಸಲಿದ್ದು, ಸುಳ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲಿದ್ದಾರೆ‌.

ಡಿಕೆಶಿ ಈ ಹಿಂದೆ ಸಿದ್ಧರಾಮಯ್ಯ ಸಂಪುಟದಲ್ಲಿ ಇಂಧನ ಸಚಿವರಾಗಿದ್ದ ವೇಳೆ ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದ ವ್ಯಕ್ತಿಯ ಜೊತೆ ವಾಗ್ವಾದ ನಡೆದಿದ್ದು, ಆ ಬಳಿಕ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಳ್ಯ ಕೋರ್ಟ್ ಡಿ.ಕೆ.ಶಿವಕುಮಾರ್ ಗೆ ಹಲವು ಬಾರಿ ನೊಟೀಸ್ ನೀಡಿದ್ದರೂ ಡಿಕೆಶಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29 ರಂದು ಖುದ್ದು ಹಾಜರಾಗುವಂತೆ ವಾರಂಟ್ ಜಾರಿಗೊಳಿಸಿತ್ತು. ಅಂದೂ ಗೈರಾಗಿದ್ದರಿಂದ ನ್ಯಾಯಾಲಯವು ಡಿ.ಕೆ. ಶಿವಕುಮಾರ್ ಗೆ ಫ್ರೋಕ್ಲಮೇಷನ್ ಆದೇಶ ಜಾರಿ ಮಾಡಿದ್ದು, ಈ ಹಿನ್ನಲೆಯಲ್ಲಿ ಅಕ್ಟೋಬರ್ 5ರಂದು ಸುಳ್ಯ ನ್ಯಾಯಾಲದಲ್ಲಿ ನಡೆಯುವ ವಿಚಾರಣೆಗೆ ಡಿ. ಕೆ. ಶಿವಕುಮಾರ್ ಹಾಜರಾಗಲಿದ್ದಾರೆ‌.

Also Read  ಉಡುಪಿ: ಭಿಕ್ಷಾಟನೆಯಲ್ಲಿ ತೊಡಗಿದ್ದ 11 ಮಕ್ಕಳ ರಕ್ಷಣೆ

ಡಿ.ಕೆ.ಶಿವಕುಮಾರ್ ಅಕ್ಟೋಬರ್ 5ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಮಾಡಲಿದ್ದು, ಬೆಳಗ್ಗೆ 11.30ರ ವೇಳೆಗೆ ಸುಳ್ಯ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಲಿದ್ದಾರೆ. ಆ ಬಳಿಕ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದು, ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.

 

 

 

Also Read  'ರಾಜ್ಯ ಸರ್ಕಾರ ಪೊಲೀಸರನ್ನೇ ಭಕ್ಷಕರನ್ನಾಗಿ ಮಾಡಿದೆ'                ಭಾಸ್ಕರ್ ರಾವ್ ಆರೋಪ

error: Content is protected !!
Scroll to Top