ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬೀಗ ➤ 20 ಕೋಟಿಗೂ ಹೆಚ್ಚಿನ ತೆರಿಗೆ ಬಾಕಿ ಹಿನ್ನೆಲೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.30. ನಗರದ ಮಲ್ಲೇಶ್ವರಂ ನಲ್ಲಿದ್ದ ಪ್ರತಿಷ್ಠಿತ ಐಷಾರಾಮಿ ಶಾಪಿಂಗ್ ಸೆಂಟರ್ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಗುರುವಾರದಂದು ಬೀಗ ಹಾಕಿದ್ದು, ಗ್ರಾಹಕರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ.

ಬಿಬಿಎಂಪಿಗೆ ಸುಮಾರು 20 ಕೋಟಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಸ್ಕ್ವೇರ್​ ಮಾಲ್ ಮಾಲಕರಿಗೆ ಎಷ್ಟೇ ನೋಟೀಸ್ ನೀಡಿದರೂ ತೆರಿಗೆ ಪಾವತಿ ಮಾಡದ ಕಾರಣ ಮಾಲ್ ನ ಮುಖ್ಯದ್ವಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಅವರಿಂದ ಇಂದು ಬೀಗ ಜಡಿಯುವ ಕಾರ್ಯಾಚರಣೆ ನಡೆದಿದ್ದು, ಈ ನಡುವೆ ಆಸ್ತಿ ತೆರಿಗೆ ಪಾವತಿಸಲು ಮಂತ್ರಿ ಮಾಲ್‌ ನೀಡಿದ್ದ ಚೆಕ್ ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದಲ್ಲಿ ಇದೆ.

Also Read  ಪಾಸ್‌ಪೋರ್ಟ್ ಡೆಲಿವರಿಗೆ ಬಂದ ಪೋಸ್ಟ್ ಮ್ಯಾನ್; 500 ರೂ. ನೀಡದ್ದಕ್ಕೆ ಪಾಸ್‌ಪೋರ್ಟ್ ಹರಿದು ಹಾಕಿದ..!

 

 

 

error: Content is protected !!
Scroll to Top