ಉಪ್ಪಿನಂಗಡಿ: ನೀರು ಎಂದು ತಿಳಿದು ಪೆಟ್ರೋಲ್ ಕುಡಿದ ವೃದ್ಧೆ ➤ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.30. ನೀರು ಎಂದು ತಿಳಿದು ಪೆಟ್ರೋಲ್ ಸೇವಿಸಿದ ವೃದ್ದೆಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆಯ ಸಂಪದಕೋಡಿಯಿಂದ ವರದಿಯಾಗಿದೆ.

ಮೃತ ವೃದ್ಧೆಯ‌ನ್ನು ಮೂಲತಃ ಬಂಟ್ವಾಳದ ನಿವಾಸಿಯಾಗಿರುವ ಪದ್ಮಾವತಿ (79) ಎಂದು ಗುರುತಿಸಲಾಗಿದೆ. ದೃಷ್ಠಿ ದೋಷದಿಂದ ಬಳಲುತ್ತಿದ್ದ ವೃದ್ಧೆಯು ಪೆರ್ನೆಯ ಸಂಪದಕೋಡಿಯಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದು, ಸೆಪ್ಟೆಂಬರ್ 26 ರಂದು ಮನೆಯಲ್ಲಿನ ಹುಲ್ಲು ಕತ್ತರಿಸುವ ಯಂತ್ರದ ಮೋಟಾರು ಚಾಲನೆಗೆಂದು ಬಾಟ್ಲಿಯಲ್ಲಿ ತಂದಿರಿಸಿದ್ದ ಪೆಟ್ರೋಲ್ ನ್ನು ತಿಳಿಯದೇ ಕುಡಿದಿದ್ದರೆನ್ನಲಾಗಿದೆ. ತೀವ್ರ ಅಸ್ವಸ್ಥರಾಗಿದ್ದ ಇವರನ್ನು ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರದಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

Also Read  ಮಂಗಳೂರು : ತಡರಾತ್ರಿ ತಲವಾರ್ ಹಿಡಿದು ದಾಂಧಲೆ

 

 

 

error: Content is protected !!
Scroll to Top