ಸುಳ್ಯ: ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ತಾಜುದ್ದೀನ್ ಅರಂತೋಡು ನೇಮಕ

(ನ್ಯೂಸ್ ಕಡಬ) Newskadaba.com ಅರಂತೋಡು, ಸೆ. 29. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ ಅರಂತೋಡಿನ ಯುವ ಕಾಂಗ್ರೆಸ್ ನಾಯಕ ತಾಜುದ್ದೀನ್ ಎಸ್ ಅರಂತೋಡು ರವರನ್ನು ಸುಳ್ಯ ಬ್ಲಾಕ್ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಿ.ಕೆ.ಹಮೀದ್ ನೇಮಕಗೊಳಿಸಿದರು.

 


ತಾಜುದ್ದೀನ್ ಅರಂತೋಡುರವರು ಸುಳ್ಯ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಮಾಜಿ ಜೊತೆ ಕಾರ್ಯದರ್ಶಿಯಾಗಿ, ಅರಂತೋಡು ವಲಯ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಯಾಗಿ, ಅರಂತೋಡು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಕೂಡಾ ಈ ಹಿಂದೆ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರಾಗಿದ್ದಾರೆ. ಇವರು ರಾಜಕೀಯದೊಂದಿಗೆ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ.

Also Read  3 ವರ್ಷದ ಬಳಿಕ ವಿದೇಶದಿಂದ ಬಂದು ಅಮ್ಮನಿಗೆ ಸರ್ಪ್ರೈಸ್ ಕೊಟ್ಟ ಮಗ..! - ಹೃದಯಸ್ಪರ್ಶಿ ವಿಡಿಯೋ ವೈರಲ್

 

error: Content is protected !!
Scroll to Top