ಕೋಡಿಂಬಾಳ: ಮಲಂಕರ‌ ಕ್ಯಾಥೋಲಿಕ್ ಚರ್ಚ್‌ನಲ್ಲಿ ಯುವಜನ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ.27. ಮಲಂಕರ ಕ್ಯಾಥೋಲಿಕ್ ಧರ್ಮಸಭೆ ಪುತ್ತೂರು ಧರ್ಮಪ್ರಾಂತ್ಯದ ನೇತೃತ್ವದಲ್ಲಿ ಯುವಜನ ದಿನಾಚರಣೆ ಹಾಗೂ ಮಲಂಕರ ಕ್ಯಾಥೋಲಿಕ್ ಸಭಾ ಪುನರ್ ಏಕೀಕರಣ ದಿನಾಚರಣೆಯನ್ನು ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚಿನಲ್ಲಿ ಆಚರಿಸಲಾಯಿತು.

ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ವ.ರೆವರೆಂಡ್ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ಮತ್ತು ಅಧ್ಯಕ್ಷತೆಯಲ್ಲಿ ನೆರವೇರಿದ ಈ ಕಾರ್ಯಕ್ರಮದಲ್ಲಿ ರೆ.ಸಿಸ್ಟರ್ ಸೋಫಿಯಾ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಮಯದಲ್ಲಿ ಯುವಜನರು ಪ್ರತಿಜ್ಞಾವಿಧಿ ಹೇಳಿದರು. ವಂ.ಬಿಷಪ್ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರು ಹಾಗೂ ಕೋಡಿಂಬಾಳ ಚರ್ಚಿನ ಧರ್ಮಗುರುಗಳಾದ ರೆ.ಫಾ ರಿನೋ ಅವರು ದಿವ್ಯಬಲಿಪೂಜೆ ನೆರವೇರಿಸಿದರು. ನಂತರ ಬಿಷಪ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಿಷಪ್ ವೆ.ರೆವರೆಂಡ್ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ರವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

Also Read  ಸಂಪ್ಯ ನಿವಾಸಿಯೊಬ್ಬರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆ ➤ ಬನ್ನೂರಿನಲ್ಲಿ ಮನೆ ಸೀಲ್ ಡೌನ್

ಬೆಳ್ತಂಗಡಿ ಧರ್ಮಪ್ರಾಂತ್ಯದ ಮೈನರ್ ಸೆಮಿನಾರಿ ರೆಕ್ಟರ್ ರೆ.ಫಾ ಸನ್ನಿ ಅಲಪ್ಪಾಟ್ ರವರು ವಿಶೇ ಅತಿಥಿಯಾಗಿ ಆಗಮಿಸಿ ಯುವಜನ ದಿನಾಚರಣೆಯ ಸಂದೇಶ ನೀಡಿದರು. ವೇದಿಕೆಯಲ್ಲಿ ಪುತ್ತೂರು ಧರ್ಮಪ್ರಾಂತ್ಯದ ಕರ್ನಾಟಕ ಪ್ರಾಂತೀಯ ಯುವಜನ ಒಕ್ಕೂಟದ ನಿರ್ದೇಶಕ ರೆ.ಫಾ ರಿನೋ, ಅಧ್ಯಕ್ಷರಾದ ಜೋಯಲ್, ಅಂತರಾಷ್ಟ್ರೀಯ ಯುವ ಸಂಘಟನೆಯ ಜೊತೆ ಕಾರ್ಯದರ್ಶಿ ಸಾಂಜೋ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೋಡಿಂಬಾಳ ಚರ್ಚಿನ ಪ್ರಧಾನ ಕಾರ್ಯದರ್ಶಿ ಸನೀಶ್ ಬಿ.ಟಿ ಸ್ವಾಗತಿಸಿ, ಕರ್ನಾಟಕ ಪ್ರಾಂತೀಯ ಯುವ ಸಂಘಟನೆ ಕೋಶಾಧಿಕಾರಿ ಲಿಜೋ ಜೇಕಬ್ ವಂದಿಸಿದರು. ಧನ್ಯಾ ಲಿಜೋ ಕಾರ್ಯಕ್ರಮ ನಿರೂಪಿಸಿದರು.

 

Also Read  ದ.ಕ, ಉಡುಪಿ ಜಿಲ್ಲೆಯ ವಿವಿಧ ಪಶು ವೈದ್ಯಾಧಿಕಾರಿಗಳ ವರ್ಗಾವಣೆ

error: Content is protected !!
Scroll to Top