ಗಂಡ ಹೆಂಡತಿಯರ ನಡುವೆ ಕಲಹ ಏಕಾಗುತ್ತದೆ ಮತ್ತು ಅದನ್ನು ಬಗೆಹರಿಸಿಕೊಳ್ಳುವುದು ಹೇಗೆ ಪ್ರತಿನಿತ್ಯ ಗಂಡ-ಹೆಂಡತಿಯ ನಡುವೆ ಕಿರಿಕಿರಿ,ಕಲಹಗಳು, ಮನಸ್ತಾಪ, ವೈಮನಸ್ಸು ಮತ್ತು ಭಿನ್ನಾಭಿಪ್ರಾಯ ಮೂಡುತ್ತಿರುತ್ತದೆ. ಗಂಡ ಹೆಂಡತಿಯರನ್ನು ಮದುವೆ ವಿಚಾರದಲ್ಲಿ ನೋಡಿದಾಗ ಇವರಿಬ್ಬರ ನಡುವೆ ಮುಖ್ಯವಾಗಿ ಇರಬೇಕಾದದ್ದು ಬುದ್ಧಿ,ಮನಸ್ಸು ,ದೇಹ. ಬುದ್ಧಿ,ಮನಸ್ಸು , ದೇಹ ಸೇರಬೇಕು ಎಂದೇ ಮದುವೆಯನ್ನು ಮಾಡುವುದು. ಬುದ್ಧಿ ಎಂದರೆ ಗಂಡ ತಪ್ಪನ್ನು ಮಾಡಿದರೆ ಹೆಂಡತಿ ಬುದ್ಧಿ ಹೇಳುವುದು ಮತ್ತು ಹೆಂಡತಿ ತಪ್ಪು ಮಾಡಿದಾಗ ಗಂಡ ಬುದ್ಧಿ ಹೇಳುವುದು ಒಂದು ಧರ್ಮ. ಮನಸ್ಸು ಎಂದರೆ ಒಬ್ಬರು ತಪ್ಪು ಮಾಡಿದರೆ ಇನ್ನೊಬ್ಬರು ಒಪ್ಪಿಕೊಳ್ಳುವಂಥ ಮನಸ್ಸಿರಬೇಕು. ಹಿಂದಿನ ಕಾಲದಿಂದಲೂ ಹೇಳುತ್ತಾರೆ ಗಂಡ-ಹೆಂಡತಿ ಏನೇ ಜಗಳ ಮಾಡಿದರು ಅದು ಉಂಡು ಮಲಗುವ ತನಕ ಎಂದು ಆದ್ದರಿಂದ ಗಂಡ-ಹೆಂಡತಿ ಸುಖಕರವಾಗಿ ಜೀವನ ನಡೆಸಬೇಕೆಂದರೆ ಬುದ್ಧಿ,ಮನಸ್ಸು,ದೇಹ ಸರಿಯಾಗಿ ಇರಬೇಕು.
ಬುದ್ಧಿ,ಮನಸ್ಸು,ದೇಹ ಇದರಲ್ಲಿ ಯಾವುದಾದರೂ ಒಂದು ಸರಿಯಾಗಿ ಇಲ್ಲವೆಂದರೆ ಕುಟುಂಬ ಎಂಬುದು ಸರಿಯಾಗಿ ನಡೆಯುವುದಿಲ್ಲ. ಅತಿ ಸೌಂದರ್ಯವು ಹೆಣ್ಣಿಗೆ ಕೆಲವೊಂದು ಸಲ ಕಷ್ಟವನ್ನು ಕೊಡುತ್ತದೆ. ಕೆಲವೊಂದು ಸಲ ಹೆಂಡತಿಯು ಎಷ್ಟೇ ಶುದ್ಧವಾಗಿದ್ದರೂ ಗಂಡನು ಅನುಮಾನ ಪಡುವಂಥದ್ದು ಮತ್ತು ಇದರಿಂದ ಜೀವನ ಸಾಕು ಎಂದು ಅನಿಸುವ ಹೆಂಗಸರು ಈ ಸಣ್ಣ ಪರಿಹಾರವನ್ನು ಮಾಡಿದರೆ ನಿಮ್ಮ ಗಂಡನು ಮಾಡಿರುವ ತಪ್ಪನ್ನು ಅವರ ತಿಳುವಳಿಕೆಗೆ ತಂದು ನಿಮ್ಮ ಯಜಮಾನ ನಿಮ್ಮ ಕೈ ಸೆರೆಯಾಗುತ್ತಾರೆ. ಪೂಜೆ ಸಾಮಗ್ರಿಯ ಅಂಗಡಿಗೆ ಹೋಗಿ ಬಜೆ ಬೇರು ತೆಗೆದುಕೊಂಡು ಬನ್ನಿ. ಇದರಿಂದ ನಿಮ್ಮ ಗಂಡನನ್ನು ಕೈವಶ ಮಾಡಿಕೊಳ್ಳಬಹುದು. ಒಂದು ಬಜೆ ಬೇರನ್ನು ತೆಗೆದುಕೊಂಡು ಅಮಾವಾಸ್ಯೆಯ ಅಥವಾ ಹುಣ್ಣಿಮೆ ಹಿಂದಿನ ದಿನ ಈ ಕೆಲಸವನ್ನು ಮಾಡಬೇಕಾಗುತ್ತದೆ. ಈ ಕಾರ್ಯವನ್ನು ಮಾಡಬೇಕಾದರೆ ಗಂಡ ಹೆಂಡತಿ ದೂರ ದೂರ ಇರಬೇಕಾಗುತ್ತದೆ. ನಂತರ ನೀವೇ ಬೇಡ ಅಂದರು ಗಂಡನು ನಿಮ್ಮ ಕೈ ಸೆರೆಯಾಗುತ್ತಾರೆ.ಮೊದಲಿಗೆ ಉತ್ತರದಿಕ್ಕಿನಲ್ಲಿ ಕೆಂಪು ವಸ್ತ್ರವನ್ನು ನೆಲದ ಮೇಲೆ ಇಟ್ಟು ಅದರ ಮೇಲೆ ಕುಳಿತುಕೊಂಡು ನಿಮ್ಮ ಎದುರಿಗೆ ಬೇವಿನ ಎಣ್ಣೆಯಿಂದ ಮಣ್ಣಿನ ದೀಪವನ್ನು ಹಚ್ಚಿ ಬಜೆ ಬೇರನ್ನು ಸರಿಯಾಗಿ ಸುಡಬೇಕು. ಪೂರ್ತಿ ಸುಟ್ಟ ನಂತರ ಕಪ್ಪು ಕಾಡಿಗೆ ಬರುತ್ತದೆ, ಈ ಕೆಲಸನ್ನು ಅಮಾವಾಸ್ಯೆ ಹಿಂದಿನ ದಿನ, ಅಮಾವಾಸ್ಯೆ ದಿನ ಮತ್ತು ಅಮಾವಾಸ್ಯೆಯ ಮಾರನೇ ದಿನ ಅಂದರೆ ಮೂರು ದಿನ ಹೀಗೆ ಮಾಡಬೇಕು. ನಂತರ ಮೂರು ದಿನದ ಅಂಜನ ಅಥವಾ ಕಾಡಿಗೆಯನ್ನು ತೆಗೆದು ಒಂದು ಕಡೆ ಇಡಿ. ನಂತರ ನಾಲ್ಕನೇ ದಿನ ನಿಮ್ಮ ಯಜಮಾನರ ಕಾಲಿಗೆ ಹಾಗೂ ತಲೆಯ ಭಾಗಕ್ಕೆ ಹಚ್ಚಬೇಕು. ಇದನ್ನು ಐದರಿಂದ ಆರು ದಿನ ಹಚ್ಚುತ್ತ ಬರಬೇಕು. ಇದರಿಂದ ನಿಮ್ಮ ಗಂಡನ ಬುದ್ಧಿ,ಮನಸ್ಸು,ದೇಹ ಹತೋಟಿಗೆ ಬರುತ್ತದೆ. ಇದರಿಂದ ನಿಮ್ಮ ಮೇಲೆ ಅನುಮಾನ ಪಡುತ್ತಿದ್ದ ಯಜಮಾನರು ನಿಮ್ಮ ಮೇಲೆ ಪ್ರೀತಿಯನ್ನು ತೋರಿಸುವುದಕ್ಕೆ ಶುರುಮಾಡುತ್ತಾರೆ.