ಕಡಬ: ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ ➤ ಆರೋಪಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ) newskadaba.com ಕಡಬ, ಸೆ.25. ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಇಲ್ಲಿನ ಕಳಾರ ಸಮೀಪ ಕಾರ್ಯಾಚರಿಸುತ್ತಿದ್ದ ಮಸಾಜ್ ಪಾರ್ಲರ್ ನಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಆರೋಪ‌ದಡಿ ಬಂಧಿತರಾಗಿದ್ದ ಮೂವರಿಗೆ ಜಾಮೀನು ಮಂಜೂರಾಗಿದೆ.

ಕೇರಳ ಮೂಲದ ವಯನಾಡ್ ನಿವಾಸಿ ಅಬ್ರಹಾಂ ಎಂಬಾತ ನಡೆಸುತ್ತಿದ್ದ ಮಸಾಜ್ ಪಾರ್ಲರ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ವಿರೋಧಿಸಿದ ಸಂದರ್ಭದಲ್ಲಿ ವೀಡಿಯೋ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಈ ಹಿಂದೆ ಅಲ್ಲಿ ಕೆಲಸ‌ ಮಾಡುತ್ತಿದ್ದ ಮಹಿಳೆಯರಿಬ್ಬರು ಮಾಧ್ಯಮ ವರದಿಗಾರರ ಮೂಲಕ ಕಡಬ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ತೆರಳಿದ ಕಡಬ ಪೊಲೀಸರು ಕೇರಳ ಮೂಲದ 25 ವರ್ಷದ ಯುವತಿ, ಪಾರ್ಲರ್ ಮಾಲಕ ಅಬ್ರಹಾಂ ಹಾಗೂ ಅನೀಶ್ ಎಂಬವರನ್ನು ಬಂಧಿಸಿದ್ದರು.

Also Read  ಮೀನಾಡಿ ಶಾಲೆಯಲ್ಲಿ ವಜ್ರಮಹೋತ್ಸವ ಪೂರ್ವಭಾವಿ ಸಭೆ ಧಾನಿಗಳಿಂದ ವಿವಿಧ ಕೊಡುಗೆ: ಎ.12ಕ್ಕೆ ವಜ್ರಮಹೋತ್ಸವ

ಹೊರ ಊರುಗಳಿಂದ ಮಸಾಜ್‌ ನೆಪದಲ್ಲಿ ಯುವತಿಯರನ್ನು ಕರೆಸಿಕೊಂಡು ಲೈಂಗಿಕವಾಗಿ ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಅನೀಶ್ ಹಾಗೂ ಯುವತಿಯಗೆ ಠಾಣೆಯಲ್ಲಿ ಜಾಮೀನು ನೀಡಲಾಗಿದ್ದು, ಅಬ್ರಹಾಂನಿಗೆ ಪುತ್ತೂರು ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

 

 

 

 

error: Content is protected !!
Scroll to Top