ಕಡಬ: ಪೊಲೀಸ್ ಸಿಬ್ಬಂದಿಯ ಅತ್ಯಾಚಾರ ಸುದ್ದಿ ವೈರಲ್ ➤ ದೂರು ಬಂದಲ್ಲಿ ಸೂಕ್ತ ಕ್ರಮ: ಡಿವೈಎಸ್ಪಿ ಗಾನ ಪಿ.ಕುಮಾರ್

(ನ್ಯೂಸ್ ಕಡಬ) newskadaba.com ಕಡಬ, ಸೆ.25. ಇಲ್ಲಿನ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಓರ್ವ ಯುವತಿಯೋರ್ವಳನ್ನು ಅತ್ಯಾಚಾರಗೈದ ಬಗೆಗಿನ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಪುತ್ತೂರು ಡಿವೈಎಸ್ಪಿ ಶನಿವಾರದಂದು ಕಡಬ ಠಾಣೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ನ್ಯಾಯ ಅರಸುತ್ತಾ ಠಾಣೆಗೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಆ ಬಳಿಕ ಸಹಾಯದ ನೆಪದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ಸ್ಥಳೀಯ ವೆಬ್ ನ್ಯೂಸ್ ಚಾನಲ್‌ಗಳು ವರದಿ ಮಾಡುತ್ತವೆ ಎಂದು ಗೊತ್ತಾದ ತಕ್ಷಣವೇ ಪತ್ರಕರ್ತರೊಬ್ಬರಿಗೆ ವರದಿ ಮಾಡದಂತೆ ದುಂಬಾಲು ಬೀಳುವ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಪುತ್ತೂರು ಎಎಸ್‌ಪಿ ಗಾನ ಪಿ. ಕುಮಾರ್ ಪತ್ರಕರ್ತರೊಂದಿಗೆ ಮಾತನಾಡಿ ವಿಷಯ ಗಮನಕ್ಕೆ ಬಂದಿದೆ, ನೊಂದ ಯುವತಿ ಅಥವಾ ಸಾರ್ವಜನಿಕರು ಹೆಸರು ಉಲ್ಲೇಖ ಮಾಡಿ ದೂರು ನೀಡಿದರೆ ಆರೋಪಿಯ ವಿರುದ್ಧ ಕ್ರಮ ಜರಗಿಸಲಾಗುವುದು ಎಂದಿದ್ದಾರೆ.

Also Read  ಪ್ರಾಣಿ ಎಂದು ತಿಳಿದು ಗುಂಡು ಹಾರಾಟ: ವ್ಯಕ್ತಿ ಮೃತ್ಯು

 

 

 

error: Content is protected !!
Scroll to Top