ಕಡಬದಲ್ಲೊಂದು ಮಸಾಜ್ ಪಾರ್ಲರ್ ನೆಪದಲ್ಲಿ ವೇಶ್ಯಾವಾಟಿಕೆ ➤ ಇಲ್ಲಿ ನಡೆಯುತ್ತಿದೆ ಹಸಿ ಮಾಂಸ ದಂಧೆ

(ನ್ಯೂಸ್ ಕಡಬ) newskadaba.com ಕಡಬ, ಸೆ.25. ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಇಲ್ಲಿನ ಕಳಾರ ಸಮೀಪ ಕಾರ್ಯಾಚರಿಸುತ್ತಿದ್ದ ಮಸಾಜ್ ಪಾರ್ಲರ್ ನಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಬಗ್ಗೆ ಇದೀಗ ಆರೋಪ‌ ಕೇಳಿ ಬಂದಿದೆ.

ಕೇರಳ ಮೂಲದ ವಯನಾಡ್ ನಿವಾಸಿ ಅಬ್ರಹಾಂ ಎಂಬಾತ ನಡೆಸುತ್ತಿದ್ದ ಮಸಾಜ್ ಪಾರ್ಲರ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ವಿರೋಧಿಸಿದ ಸಂದರ್ಭದಲ್ಲಿ ವೀಡಿಯೋ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಈ ಹಿಂದೆ ಅಲ್ಲಿ ಕೆಲಸ‌ ಮಾಡುತ್ತಿದ್ದ ಮಹಿಳೆಯರಿಬ್ಬರು ಮಾಧ್ಯಮ ವರದಿಗಾರರ ಮೂಲಕ ಕಡಬ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ತೆರಳಿದ ಕಡಬ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೇರಳ ಮೂಲದ 25 ವರ್ಷದ ಯುವತಿ, ಪಾರ್ಲರ್ ಮಾಲಕ ಅಬ್ರಹಾಂ ಹಾಗೂ ಅನೀಶ್ ಎಂದು ಗುರುತಿಸಲಾಗಿದೆ.

Also Read  ಸೆ. 11ರಿಂದ 13ರ ವರೆಗೆ ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ - ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆಯ ಹಿನ್ನೆಲೆ

ಹೊರ ಊರುಗಳಿಂದ ಮಸಾಜ್‌ ನೆಪದಲ್ಲಿ ಯುವತಿಯರನ್ನು ಕರೆಸಿಕೊಂಡು ಲೈಂಗಿಕವಾಗಿ ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

 

 

error: Content is protected !!
Scroll to Top